Site icon PowerTV

ಜಿಲ್ಲೆಯಲ್ಲಿ ಕಳಪೆ ಕಾಮಗಾರಿ ಮಾಡಿದವ್ರನ್ನ ಬಿಡುವ ಮಾತಿಲ್ಲ; ಸಚಿವ ಮುನಿರತ್ನ

ಕೋಲಾರ; ಅಕ್ಟೋಬರ್ ತಿಂಗಳಿನಲ್ಲಿ 5 ದಿನಗಳ‌ ಕಾಲ ಜಿಲ್ಲೆಯಲ್ಲಿ ವಿವಿಧ ರಸ್ತೆಗಳು ಸೇರಿದಂತೆ ಜಿಲ್ಲೆಯ ಪ್ರಗತಿ ಪರಿಶೀಲನೆ‌ ಮಾಡಲಾಗುವುದು. ಈ ವೇಳೆ ಯಾವುದೇ ಕಳಪೆ ಸೇರಿದಂತೆ ಅಭಿವೃದ್ದಿಗೆ ಮಾರಕವಾಗಿದ್ದವರನ್ನ ಯಾರನ್ನೂ ಸಹ ಬಿಡುವುದಿಲ್ಲ. ಸೂಕ್ತ ಕೈಗೊಳ್ಳಲಾಗುವುದು ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಎಚ್ಚರಿಕೆ ನೀಡಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸೇರಿದಂತೆ ಹಿಂದಿನ, ಈಗಿನ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಯಲಿದೆ. ನನ್ನ ವಿರುದ್ದ ಆಧಾರವಿಲ್ಲದೆ ಅರೋಪಗಳನ್ನ ಮಾಡಲಾಗಿದೆ. ಯಾರೇ ತಪ್ಪು ಮಾಡಿದ್ರು ನಾನು ಹೆದರುವುದಿಲ್ಲ‌. ಇದರಲ್ಲಿ ಯಾರೆ ಇದ್ರೂ ಬಿಡುವ ಮಾತೇ ಇಲ್ಲ. ಗುತ್ತಿಗೆದಾರರ ಸಂಘದ 19 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇನೆ. ನನ್ನ ವಿರುದ್ದ ಮಾತನಾಡಿದವರ ವಿರುದ್ದ 50 ಕೋಟಿ ರುಪಾಯಿ ಮಾನನಷ್ಟ ಮೊಕ್ಕದಮ್ಮೆ ಹಾಕಿದ್ದೇನೆ ಎಂದು ತಿಳಿಸಿದರು.

ಇನ್ನು ಮನಸಾಕ್ಷಿಗೆ ತಕ್ಕಂತೆ ಕೆಲಸ‌ ಮಾಡಿಲ್ಲವಾದ್ರು, ನನ್ನ ವಿರುದ್ದ ಪಿತೂರಿ ಮಾಡಿದ್ರೆ ನಾನು ಸುಮ್ಮನಿರಲ್ಲ. ಕಳಪೆ ಕಾಮಗಾರಿ ಮಾಡಿದವರನ್ನ ಬಿಡುವ ಮಾತೇ ಇಲ್ಲ. ಜಿಲ್ಲೆಯ ಅಭಿವೃದಿ ದೃಷ್ಟಿಯಿಂದ ಅನುದಾನಕ್ಕೆ ಯಾವುದೇ ಕೊರತೆ ಇಲ್ಲ‌. ಕೋಟಿಗಳಿಂದ ರೂ.ಗಳ ವರೆಗೆ ಯಾವುದೇ ಕಾಮಗಾರಿ ಬಿಡುವುದಿಲ್ಲ. ಎಲ್ಲಾ ಕಾಮಗಾರಿ, ಗುತ್ತಿಗೆದಾರರು, ಎಲ್ಲರ ಸಮ್ಮುಖದಲ್ಲೆ ಕಾಮಗಾರಿ ಪರಿಶೀಲನೆ ಮಾಡಲಾಗುವುದು‌ ಎಂದು ಮುನಿರತ್ನ ತಿಳಿಸಿದರು.

ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ಗುತ್ತಿಗಾರರ ಸಂಘಟ ಅಧ್ಯಕ್ಷ ಕೆಂಪಣ್ಣ ಅವರು ಸಚಿವ ಮುನಿರತ್ನ ಅವರು ಜಿಲ್ಲೆಯಲ್ಲಿ ಯಾವುದೇ ಕಾಮಗಾರಿ ನಡೆದರು 40 % ಕಮಿಷನ್​ ನೀಡಬೇಕೆಂದು ಆರೋಪ ಮಾಡಿದ್ದರು.

Exit mobile version