Site icon PowerTV

ಅಗ್ನಿ ಶಾಮಕ ಕಚೇರಿ ಮೇಲೆ ಲೋಕಾಯುಕ್ತ ದಾಳಿ.!

ಗದಗ; ಶಾಲೆಯ ಪರವಾನಿಗೆ ನವೀಕರಣದ ನಿರಪೇಕ್ಷಣಾ ಪತ್ರ ನೀಡಲು ಲಂಚದ ಬೇಡಿಕೆ ಹಿನ್ನಲೆಯಲ್ಲಿ ಅಗ್ನಿ ಶಾಮಕ ಕಚೇರಿ ಮೇಲೆ ಜಿಲ್ಲಾ ಲೋಕಾಯುಕ್ತರ ತಂಡ ಇಂದು ದಾಳಿ ನಡೆಸಿದೆ.

ಶಾಲೆಯ ಪರವಾನಿಗೆ ನವೀಕರಣದ ನಿರಪೇಕ್ಷಣಾ ಪತ್ರ ನೀಡಲು ಅಗ್ನಿಶಾಮಕ ಸಿಬ್ಬಂದಿ ಸುಮಾರು 7 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಲೋಕಾಯುಕ್ತ ತಂಡ ಗದಗ ನಗರದ ಎಪಿಎಂಸಿ ಆವರಣದಲ್ಲಿರುವ ಅಗ್ನಿ ಶಾಮಕ ಕಚೇರಿ ಮೇಲೆ ದಾಳಿ ನಡೆಸಿ ರೆಡ್​ ಹ್ಯಾಂಡ್​ ಆಗಿ ಇಡಿದಿದ್ದು, ತೀವ್ರವಾದ ಪರಿಶೀಲನೆಯನ್ನು ನಡೆಸಲಾಗುತ್ತಿದೆ.

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಎಸ್ ಎಸ್ ಕೂಡ್ಲಮಠ ಶಾಲೆ ನಿರಪೇಕ್ಷಣಾ ಪತ್ರಕ್ಕಾಗಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ನವೀನ ಕುಮಾರ ಕಗ್ಗಲಗೌಡರ ಅವರಿಂದ ಲಂಚದ ಬೇಡಿಕೆ ಇಟ್ಟು ಏಳು ಸಾವಿರ ರೂಪಾಯಿ ಲಂಚವನ್ನು ಪಡೆಯುವಾಗ ಲೋಕಾಯುಕ್ತ ಎಸ್​.ಪಿ ಸತೀಶ ಚಿಟ್ಟಿಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ, ಇನ್ಸ್ಪೆಕ್ಟರ್ ರವಿ ಪುರುಷೋತ್ತಮ ಹಾಗೂ ಆಜೀಜ್ ಕಾಲಾದಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Exit mobile version