Site icon PowerTV

ಯಾದಗಿರಿಯಲ್ಲಿ ಸಿಡಿಲು ಬಡಿದು ನಾಲ್ವರ ಸಾವು.!

ಯಾದಗಿರಿ; ಸಿಡಿಲು ಬಡಿದು ನಾಲ್ಕು ಜನ ದುರ್ಮರಣಕ್ಕೀಡಾಗಿದ್ದು, ಒಬ್ಬನ ಪರಿಸ್ಥತಿ ಗಂಭೀರವಾಗಿರುವ ಘಟನೆ ಯಾದಗಿರಿ ತಾಲೂಕಿನ ಎಮ್ ಹೊಸಳ್ಳಿ ಗ್ರಾಮದ ಬಳಿ ನಡೆದಿದೆ.

ಗಾಜರಕೋಟ್ ಗ್ರಾಮದ ತಾಯಿ ಮೋನಮ್ಮ( 25) ಮಕ್ಕಳಾದ ಬಾನು( 4)ಶ್ರೀನಿವಾಸ (2) ಮತ್ತೊಂದು ಘಟನೆಯಲ್ಲಿ ಸಾಬಣ್ಣ (17) ಮೃತ ದುರ್ದೈವಿಗಳು, ತಾಯಿ ಸೇರಿ ಇಬ್ಬರು ಮಕ್ಕಳಿಗೆ ಸಿಡಿಲು ಬಡಿದು ಸಾವೀಗಿಡಾಗಿದ್ದಾರೆ. ಇದೇ ಗ್ರಾಮದಲ್ಲಿ ಮತ್ತೊಂದು ಕಡೆ ಸಿಡಿಲಿಗೆ ಯುವಕನ ಮೃತಪಟ್ಟರೆ, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.

ಆಸ್ಪತ್ರೆಗೆಂದು ತೆರಳಿ ವಾಪಸ್ ಬರುತ್ತಿದ್ದ ವೇಳೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸಿಡಿಲಿಗೆ ಬಲಿಯಾದರೆ, ಅದೇ ಗ್ರಾಮದಲ್ಲಿ ಇನ್ನೊಬ್ಬ ವ್ಯಕ್ತಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಸದ್ಯ ಗಾಯಾಳು ಭೀಮಾಶಂಕರ್ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version