Site icon PowerTV

ಬಡವರಿಗೆ, ದೀನ ದಲಿತರಿಗೆ RSS ಸಹಾಯ ಮಾಡಿದೆ; ಸಿಎಂ ಬೊಮ್ಮಾಯಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ರಿಂದ ಆರ್​ಎಸ್​ಎಸ್​ ಬ್ಯಾನ್ ಮಾಡೋ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಎಸ್‌ಎಸ್ ಬಡವರಿಗೆ, ದೀನ ದಲಿತರಿಗೆ ಹತ್ತು ಹಲವಾರು ಸಂಸ್ಥೆ ಕಟ್ಟಿ‌ ಸಹಾಯ ಮಾಡಿದೆ. ಆರ್​ಎಸ್​ಎಸ್ ಬ್ಯಾನ್ ಮಾಡುವಂತಹದ್ದು ಹೇಳಿಕೆ ಅರ್ಥಹೀನವಾದದ್ದು, ಯಾವಾಗಲೂ ಬೆಕ್ಕಿನ ಕಣ್ಣಲ್ಲಿ ಇಲಿ‌ ಅನ್ನೋ ರೀತಿ ಸ್ವಭಾವದವರು. ಸಿಎಂ ಆಗಿದ್ದ ವೇಳೆಯಲ್ಲಿ ಸಿದ್ದರಾಮಯ್ಯ ಪಿಎಫ್ಐ ಸಂಘಟನೆಗಳ ಮೇಲಿನ ಕೇಸ್ ವಾಪಸ್ ತೆಗೆದುಕೊಂಡರು ಎಂದು ಸಿದ್ದರಾಮಯ್ಯ ಅವರಿಗೆ ಸಿಎಂ ಕೌಂಟರ್​ ನೀಡಿದ್ದಾರೆ.

ಇನ್ನು ಪಿಎಫ್ಐ ಬ್ಯಾನ್ ರಾಜಕೀಯ ಗಿಮಿಕ್ ಎಂಬ ತನ್ವೀರ್‌ಸೇಠ್ ಹೇಳಿಕೆಗೆ ಸಿಎಂ ಮಾತನಾಡಿ, ತನ್ವೀರ್‌ ಸೇಠ್ ಮೇಲೆ ಅಟ್ಯಾಕ್ ಮಾಡಿರೋದೆ ಪಿಎಫ್ಐ ಸಂಘಟನೆಯವರು. ಅವರೇ ಬಂದು ಹೇಳಿದ್ರು, ಪಿಎಫ್ಐನಿಂದ ದೊಡ್ಡ ಕಾಟ‌ ಆಗಿದೆ ಕ್ರಮ ಕೈಗೊಳ್ಳಿ ಅಂತಾ ಸ್ಟೇಟ್ ಮೆಂಟ್ ಕೊಟ್ಟಿದ್ರು, ಈಗ ರಾಜಕೀಯಕ್ಕೆ ತನ್ನ ಮೇಲೆ ಅಟ್ಯಾಕ್ ಆಗಿರೋದನ್ನ ಮರೆತು ಮಾತಾಡ್ತಿದ್ದಾರೆ. ಇದಕ್ಕೆ ಏನು ಹೇಳೋಕೆ ಆಗುತ್ತದೆ ಎಂದರು.

Exit mobile version