Site icon PowerTV

ಅಪಹರಿಸಿ ಮದುವೆ ಮಾಡಿಕೊಂಡ ಬಸ್​​ ಕಂಡಕ್ಟರ್, ಅರ್ಚಕರಿಗೆ ಕಠಿಣ ಶಿಕ್ಷೆ.!

ಚಾಮರಾಜನಗರ; ಬಾಲ್ಯವಿವಾಹ, ಲೈಂಗಿಕ ಕಿರುಕುಳ ಪ್ರಕರಣದ ಅಡಿಯಲ್ಲಿ ಕಂಡಕ್ಟರ್ ಹಾಗೂ ಅರ್ಚಕರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಪ್ರಕಟಿಸಿದೆ.

ಕೆಎಸ್ಆರ್ಟಿಸಿ ಕಂಡಕ್ಟರ್ ರವಿಕುಮಾರ್ ಹಾಗೂ ಅರ್ಚಕರದ ಕೆ.ಎನ್.ಶಾಸ್ತ್ರಿ ಮತ್ತು ರಾಜೇಶ್ವರ್ ಶಾಸ್ತ್ರಿ ಶಿಕ್ಷೆಗೊಳಗಾದ ಅಪರಾಧಿಗಳು, ಅಪ್ರಾಪ್ತೆ ಬಾಲಕಿಯನ್ನು ಪರಿಚಯಿಸಿಕೊಂಡು ಬಲವಂತದಿಂದ ಬಸ್ ಕಂಡಕ್ಟರ್ ವಿವಾಹ ಮಾಡಿಕೊಂಡಿದ್ದ, ಮದುವೆ ಮಾಡಿಸಿದ್ದ ಇಬ್ಬರು ಅರ್ಚಕರಿಗೂ ಹಾಗೂ ಕಂಡಕ್ಟರ್​ಗೆ ಕಠಿಣ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ.

ಕಾಲೇಜಿಗೆ ತೆರಳುತ್ತಿದ್ದ ಬಾಲಕಿಯನ್ನು ಕಂಡಕ್ಟರ್ ಪರಿಚಯಿಸಿಕೊಂಡಿದ್ದ, 2017 ರ ನವೆಂಬರ್ 23 ರಂದು ಕಾರಿನಲ್ಲಿ ಬಲವಂತವಾಗಿ ಹತ್ತಿಸಿಕೊಂಡು ಹೋಗಿ ಶ್ರೀರಂಗಪಟ್ಟಣದಲ್ಲಿ ವಿವಾಹ ಕಂಡಕ್ಟರ್​ ಮಾಡಿಕೊಂಡಿದ್ದನು. ಈತನಿಗೆ ಸಹಕಾರ ಕೊಟ್ಟು ಇಬ್ಬರು ಅರ್ಚಕರು ವಿವಾಹ ಮಾಡಿಸಿದ್ದರು. ವಿವಾಹವಾದ ಬಳಿಕ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದ ಆರೋಪ ಸಾಬೀತು ಆಗಿದೆ.

ಕಂಡಕ್ಟರ್​ಗೆ (ಮೊದಲನೇ) ಆರೋಪಿಗೆ 3 ವರ್ಷ ಶಿಕ್ಷೆ ಇದರಲ್ಲಿ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ಅರ್ಚಕರುಗಳಿಗೆ ಒಂದು ವರ್ಷ ಕಠಿಣ ಶಿಕ್ಷೆಗೆ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎ.ಸಿ ನಿಶಾರಾಣಿರಿಂದ ಆದೇಶ ಹೊರಡಿಸಲಾಗಿದೆ.

Exit mobile version