Site icon PowerTV

ಅಮೇರಿಕಾದ ಮಾಧ್ಯಮಗಳು ತಾರತಮ್ಯ ಮಾಡುತ್ತದೆ : ಎಸ್​ ಜೈಶಂಕರ್

ಅಮೆರಿಕದ ಮಾಧ್ಯಮಗಳು ಭಾರತದ ಬಗ್ಗೆ ತಾರತಮ್ಯದಿಂದ ಕೂಡಿದ ವರದಿಗಳನ್ನು ಪ್ರಕಟಿಸುತ್ತಿವೆ ಎಂದು ವಿದೇಶಾಂಗ ಸಚಿವ S.ಜೈಶಂಕರ್ ಹೇಳಿದ್ದಾರೆ.

ಹೆಸರು ಹೇಳದೆಯೇ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿನ ಮಾಧ್ಯಮಗಳನ್ನು ಗಮನಿಸಿದೆ. ಈ ನಗರದಿಂದ ಪ್ರಕಟವಾಗುವ ಪತ್ರಿಕೆಯೊಂದು ಸೇರಿದಂತೆ ಇಲ್ಲಿನ ಮಾಧ್ಯಮಗಳು ಏನು ಪ್ರಕಟಿಸುತ್ತಿವೆ ಎಂಬುದು ನಿಜವಾಗಿಯೂ ನಿಮಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇನ್ನು, ಜೆಫ್ ಬೆಜೋಸ್ ಮಾಲೀಕತ್ವದ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ವಾಷಿಂಗ್ಟನ್ ಡಿಸಿಯಿಂದ ಪ್ರಕಟವಾಗುತ್ತಿದೆ. ಮಾಧ್ಯಮಗಳ ವರದಿಗಳು ಪಕ್ಷಪಾತದಿಂದ ಕೂಡಿವೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.

Exit mobile version