Site icon PowerTV

ಸರ್ಕಾರಿ ಶಾಲೆಯಲ್ಲಿ ಪೈಗಂಬರ್ ಪ್ರಬಂಧ ಸ್ಪರ್ಧೆ; ಕ್ಷಮಿಸಿ ಎಂದ ಮುಖ್ಯೋಪಾಧ್ಯಾಯ

ಗದಗ; ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹಮ್ಮದ್ ಪೈಗಂಬರ್ ಕುರಿತು ಪ್ರಬಂಧ ವಿಚಾರವಾಗಿ ಇಂದು ಶ್ರೀರಾಮ ಸೇನೆ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು ಮೂಲದ ಸಂಸ್ಥೆಯೊಂದರಿಂದ ಸ್ಪರ್ಧೆ ಆರೋಪ ಕೇಳಿಬಂದಿದೆ. ಶಾಲಾ ಮಕ್ಕಳಿಗೆ ಮಹಮ್ಮದ್ ಪೈಗಂಬರ್ ಕುರಿತು ಪುಸ್ತಕ ಹಂಚಿಕೆ ಮಾಡಿ ಗದಗ ಸಮೀಪದ ನಾಗಾವಿ ಗ್ರಾಮದ ಶಾಲೆಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಪುಸ್ತಕ ಓದಿ ಪ್ರಬಂಧ ಬರೆಯುವ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದರೆ ಸಂಸ್ಥೆಯಿಂದ 5000 ರೂ. ಬಹುಮಾನ ಘೋಷಿಸಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಶಾಲೆಗೆ ಮುತ್ತಿಗೆ ಹಾಕಲಾಯಿತು.

ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರಗೆ ಶ್ರೀರಾಮ ಸೇನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಮುಖ್ಯೋಪಾಧ್ಯಾಯ ತಪ್ಪಾಯ್ತು ಕ್ಷಮಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

Exit mobile version