Site icon PowerTV

ಪಾಕಿಸ್ತಾನ ನೇರವಾಗಿ PFI ಸಂಘಟನೆಯನ್ನ ಬಳಸಿಕೊಳ್ಳುತ್ತಿದೆ; ಸಚಿವ ಬಿಸಿ ನಾಗೇಶ್ ಆರೋಪ

ನವದೆಹಲಿ: ಕಾಂಗ್ರೆಸ್‌ಗೆ ಹಾವಡಿಸುವ ಪರಿಸ್ಥಿತಿಗೆ ಬಂದಿದೆ. ಬುಟ್ಟಿಯಲ್ಲಿ ಹಾವಿದೆ ಅಂತಾ ಬೆದರಿಸುವ ಪ್ರಯತ್ನ ಮಾಡ್ತಿದೆ. ಈವರೆಗೂ ಹಾವು ತೊರಿಸುವ ಕೆಲಸ ಮಾಡ್ತಿಲ್ಲ ಎಂದು ಶಿಕ್ಷಣ ಸಚಿವ ಪ್ರಾಥಮಿಕ ಬಿ.ಸಿ ನಾಗೇಶ್ ಅವರು ಹೇಳಿದರು.

ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೇಲೆ 40% ಭ್ರಷ್ಟಾಚಾರ ಆರೋಪ ಮಾಡುವ ಕಾಂಗ್ರೆಸ್ ದೂರು ದಾಖಲು ನೀಡುತ್ತಿಲ್ಲ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ನೀಡಬಹುದಿತ್ತು. ಆದರೆ ಯಾವ ದೂರು ದಾಖಲು ಮಾಡಿಲ್ಲ ಎಂದರು.

ರಾಜ್ಯ ಕಾಂಗ್ರೆಸ್‌ಗೆ ಹಾವಡಿಸುವ ಪರಿಸ್ಥಿತಿಗೆ ಬಂದಿದೆ. ಕಾಂಗ್ರೆಸ್ ಇಂತಹ ಪರಿಸ್ಥಿತಿ ಬರಬಾದಿತ್ತು ಅವರ ಬಗ್ಗೆ ನನಗೆ ಕರುಣೆ ಇದೆ ಎಂದು ಸಚಿವರು ಹೇಳಿದರು.

ಇನ್ನು ಪಿಎಫ್​ಐ ಹಾಗೂ ಎಸ್​ಡಿಪಿಐ ಬಗ್ಗೆ ಮಾತನಾಡಿ, ಮುಸ್ಲಿಂಮರೆಲ್ಲರು ಕೆಟ್ಟವರಲ್ಲ. ಆದ್ರೆ, ಭಯೋತ್ಪಾದಕ ಚಟುವಟಿಕೆಯಲ್ಲಿರುವ 99% ಅದೇ ಸಮುದಾಯ ಜನರಾಗಿದ್ದಾರೆ. ಮುಸ್ಲಿಂಮರಲ್ಲೂ ದೇಶದ ಬಗ್ಗೆ ಅಭಿಮಾನ ಹೊಂದಿದವರು ಇದ್ದಾರೆ. ಆದರೆ ಹೀಗೆ ತಪ್ಪು ಮಾಡುವವರು ಸಮುದಾಯದ ಹೆಸರಿನಲ್ಲಿ ಆಶ್ರಯ ಪಡೆಯುವುದು ಸರಿಯಲ್ಲ. ಪಾಕಿಸ್ತಾನ ನೇರವಾಗಿ ಕೆಲಸ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಪಿಎಫ್‌ಐ ಅನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರ ಅಕೌಂಟ್ ಚೆಕ್ ಮಾಡಿದ್ರೆ ಮಾಹಿತಿ ಗೊತ್ತಾಗುತ್ತದೆ. ಈಗಾಗಲೇ ಈ ಬಗ್ಗೆ ಎನ್‌ಐಎ ದಾಳಿ ನಡೆಸಿ ತನಿಖೆ ನಡೆಸುತ್ತಿದೆ. ದೇಶದಲ್ಲಿ ಕುಕೃತ್ಯ ಎಸಗುವ ಮೊದಲು ರಾಷ್ಟ್ರದ ದೃಷ್ಟಿಯಿಂದ ಇಂತಹ ದಾಳಿ ಒಳ್ಳೆಯದು ಎಂದು ಸಚಿವರು ತಿಳಿಸಿದರು.

Exit mobile version