Site icon PowerTV

ಇನ್ನೇನು ಬಿದ್ರೂ ಅನ್ನುವಷ್ಟರಲ್ಲಿ ಎದ್ದು ನಿಂತ ಸಿದ್ದರಾಮಯ್ಯ

ಬಾಗಲಕೋಟೆ; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಡವಿ ಇನ್ನೇನು ಬಿದ್ದರು ಎನ್ನುವಷ್ಟರಲ್ಲಿ ಕೈಹಿಡಿದು ಬೆಂಬಲಿಗರು ಮೇಲೆತ್ತಿದ ಘಟನೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ನಡೆದಿದೆ.

ಮಾಜಿ ಸಚಿವ ಆರ್.ಬಿ ತಿಮ್ಮಾಪೂರ ಅವರ 60ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಇಂದು ಮುಧೋಳದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿದ್ದರಾಮಯ್ಯ ಅವರು ಬೀಡಲುತ್ತಿದ್ದ ವೇಳೆಯಲ್ಲಿ ತಕ್ಷಣವೇ ಮಾಜಿ ಸಚಿವ ವೀರಕುಮಾರ್ ಪಾಟೀಲ ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿ ಕೈ ಹಿಡಿದು ಮುಂದಾಗುತ್ತಿದ್ದ ಅಪಾಯ ತಪ್ಪಿಸಿದ್ದಾರೆ.

ಹುಟ್ಟುಹಬ್ಬದ ವೇದಿಕೆಯಲ್ಲೇ ಸಿದ್ದರಾಮಯ್ಯ ಅವರು ಆಯಾತಪ್ಪುತ್ತಿದ್ದಂತೆ ಅವರನ್ನ ಕೈಹಿಡಿದು ಎಬ್ಬಿಸಿದರು. ನಂತರ ಈ ಘಟನೆಯಿಂದ ಒಂದು ಕ್ಷಣ ಸಿದ್ದರಾಮಯ್ಯ ಗಲಿಬಿಲಿಗೊಂಡರು. ಬಳಿಕ ಸಾವರಿಸಿಕೊಂಡು ವೇದಿಕೆಯತ್ತ ಆಗಮಿಸಿ ಸಿದ್ದರಾಮಯ್ಯ ಜನರತ್ತ ಕೈಬೀಸಿದರು. ಜ್ಯೋತಿ ಬೆಳಗಿಸುವ ಮೂಲಕ ಹುಟ್ಟುಹಬ್ಬ ಕಾರ್ಯಕ್ರಮವನ್ನ ಸಿದ್ದರಾಮಯ್ಯ ಉದ್ಘಾಟಿಸಿದರು.

Exit mobile version