Site icon PowerTV

ದಸರಾ ಹಬ್ಬದ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು.!

ಮೈಸೂರು: ನಾಡಹಬ್ಬ ದಸರಾ ಹಬ್ಬದ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಮೃತ ವ್ಯಕ್ತಿಗೂ ಕವಿಗೋಷ್ಠಿಗೆ ಆಹ್ವಾನ ನೀಡಿ ಜಿಲ್ಲಾಡಳಿತ ಎಡವಟ್ಟು ಮಾಡಿಕೊಂಡಿದೆ.

ಆಕಾಶವಾಣಿ ನಿಲಯ ನಿರ್ದೇಶಕರಾಗಿದ್ದ ರವೀಂದ್ರ ಕುಮಾರ್ ಮೃತಪಟ್ಟಿದ್ದು, ದಸರಾ ಸಾಹಿತಿಗಳ ಆಹ್ವಾನ ಪತ್ರಿಕೆಯಲ್ಲಿ ನಿಧನರಾಗಿದ್ದ ಸಾಹಿತಿ ಹೆಸರು ಪ್ರಕಟಣೆ ಮಾಡಲಾಗಿದೆ. 2019ರಲ್ಲೇ ಹೃದಯಾಘಾತದಿಂದ ರವೀಂದ್ರ ಕುಮಾರ್ ನಿಧನರಾಗಿದ್ದರು.

ರವೀಂದ್ರ ಕುಮಾರ್ ಹೆಸರು ಮುದ್ರಿಸಿರುವ ದಸರಾ ಆಯೋಜಕರು, ವಿಷಯ ತಿಳಿಯುತ್ತಿದ್ದಂತೆ ಮರು ಪಟ್ಟಿ ಸಮಿತಿ ಬಿಡುಗಡೆ ಮಾಡಿದೆ. ಈ ಸಮಿತಿಯಲ್ಲಿ ಸಂಸದ ಪ್ರತಾಪ ಸಿಂಹ ಹಾಗೂ ಚಾಮರಾಜನಗರ ಸಂಸದ ಎಂದು ಅಧಿಕಾರಿಗಳು ಮುದ್ರಿಸಿದ್ದಾರೆ.

ದಸರಾ ಕವಿಗೋಷ್ಠಿ ಸೋಮವಾರ ಮಾನಸ ಗಂಗೋತ್ರಿ ಸೆನೆಟ್ ಭವನದಲ್ಲಿ ನಡೆಯಲಿದ್ದು, ಕವಿಗೋಷ್ಠಿಯಲ್ಲಿ ನಾಡಿನ ಹೆಸರಾಂತ ಕವಿಗಳು ಭಾಗಿಯಾಗಲಿದ್ದಾರೆ. ಕವಿಗಳ ಜೊತೆ ಮೃತ ಕವಿಯ ಹೆಸರು ಸೇರ್ಪಡೆಯಾಗಿದ್ದು, ಸಾಹಿತ್ಯ ವಲಯದಲ್ಲಿ ಅಪಸ್ವರ ಕೇಳಿ ಬರುತ್ತಿದೆ.

Exit mobile version