Site icon PowerTV

ಕಾಂಗ್ರೆಸ್​​​ನವರಿಗೆ ಭಯ ಶುರುವಾಗಿದೆ : B.C.ಪಾಟೀಲ್

ಹಾವೇರಿ : ಬೊಮ್ಮಾಯಿಯವರು ಸಿಎಂ ಆದಾಗಿನಿಂದಲೂ ಕಾಂಗ್ರೆಸ್​​​ನವರು ಅಪಪ್ರಚಾರ ಮಾಡ್ತಾನೇ ಬಂದ್ರು. ಸಿಎಂ ಬದಲಾವಣೆ ಮಾಡ್ತಾರೆ ಎಂದು ಸುಳ್ಳು ವದಂತಿ ಹರಡ್ತಾನೆ ಬಂದ್ರು, ಆದ್ರೆ ಸಿಎಂ ಬೊಮ್ಮಾಯಿ ಯಶಸ್ವಿಯಾಗಿ, ಪ್ರಾಮಾಣಿಕವಾಗಿ, ದಕ್ಷವಾಗಿ ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡಿ, ಜನಾನುರಾಗಿ ಸಿಎಂ ಆಗಿದ್ದಾರೆ ಎಂದು ಕೃಷಿ ಸಚಿವ B.C.ಪಾಟೀಲ್​​​ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​​​ನವರಿಗೆ ಭಯ ಆರಂಭವಾಗಿದೆ. ಅವರಿಗೆ ಬೊಮ್ಮಾಯಿ ಮತ್ತು ಯಡಿಯೂರಪ್ಪನವರ ನೇತೃತ್ವದಲ್ಲಿ ಮುಂದೆ ಠೇವಣಿ ಕಳೆದುಕೊಳ್ಳುತ್ತೇವೆ ಎನ್ನುವ ಭಾವನೆ ಬಂದಿದೆ ಎಂದು ಕಾಂಗ್ರೆಸ್​​ ವಿರುದ್ಧ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್​​ನವರು ಎಷ್ಟು ಸತ್ಯ ಹರಿಶ್ಚಂದ್ರರು ಅಂದು ಅವರ ಆತ್ಮವನ್ನ ಮುಟ್ಟಿ ನೋಡಿಕೊಳ್ಳಲಿ. PFI ಬ್ಯಾನ್ ಮಾಡುವ ವಿಚಾರವನ್ನ ಮುಂದೆ ಸರ್ಕಾರ ತೀರ್ಮಾನಿಸಲಿದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆಯೇ ಇಲ್ಲ ಎಂದರು.

Exit mobile version