Site icon PowerTV

85,705 ಕೋಟಿ ರೂ ಆಸ್ತಿ ಹೊಂದಿರುವ ತಿಮ್ಮಪ್ಪ

ಹೈದರಾಬಾದ್‌: ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿಯ ತಿರುಪತಿ ತಿಮ್ಮಪ್ಪನ ಖಜಾನೆ ಭರ್ಜರಿಯಾಗಿ ತುಂಬಿದೆ.
ಕೊರೊನಾ ಕಾಲದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಿದ್ದ ತಿಮ್ಮಪ್ಪನ ಬಳಿ ಭೂಮಿ, ಒಡವೆ ಇತ್ಯಾದಿ ರೂಪದಲ್ಲಿ ಸಾವಿರಾರು ಕೋಟಿ ರೂ. ಸಂಪತ್ತು ಸಂಗ್ರಹಗೊಂಡಿದೆ.

ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ (ಟಿಟಿಡಿ) ದೇಶಾದ್ಯಂತ ಹೊಂದಿರುವ 960 ಸ್ವತ್ತುಗಳ ಮೌಲ್ಯ 85,705 ಕೋಟಿ ರೂ. ಆಗಿದೆ. ಆದರೆ ಈ ಸ್ವತ್ತುಗಳ ಇಂದಿನ ಮಾರುಕಟ್ಟೆ ಮೌಲ್ಯವು ಒಂದೂವರೆ ಪಟ್ಟು ಹೆಚ್ಚಿದ್ದು, ಸುಮಾರು 2 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇನ್ನು, ಇಷ್ಟೊಂದು ಸಂಪತ್ತು ಹೊಂದಿದ ದೇಗುಲ ಜಗತ್ತಿನಲ್ಲೇ ಬೇರೆಲ್ಲೂ ಇಲ್ಲ.ನಿತ್ಯವೂ ತಿಮ್ಮಪ್ಪನಿಗೆ ಕಾಣಿಕೆ ರೂಪದಲ್ಲಿ ಭಕ್ತರು ನಗದು, ಒಡವೆಗಳನ್ನು ನೀಡುವುದು ಸಾಮಾನ್ಯ. ಹಬ್ಬ ಹರಿದಿನಗಳಲ್ಲಿ ಹಾಗೂ ನವರಾತ್ರಿ ಹಿನ್ನೆಲೆಯಲ್ಲಿ ಸೋಮವಾರದಿಂದ ಶುರುವಾಗಿರುವ ಬ್ರಹ್ಮೋತ್ಸವದಲ್ಲಿ ದೇಣಿಗೆ ಪ್ರಮಾಣ ಹೆಚ್ಚುತ್ತದೆ. ಸರಕಾರದ ಸೂಚನೆಯಂತೆ ಕಳೆದ ವರ್ಷದಿಂದ ಟಿಟಿಡಿಯು, ತಾನು ಹೊಂದಿರುವ ಆಸ್ತಿ ಬಗ್ಗೆ ಶ್ವೇತ ಪತ್ರ ಪ್ರಕಟಿಸುತ್ತಿದೆ. ಈ ವರ್ಷ ಆಸ್ತಿಯ ಮೌಲ್ಯವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ವೈ.ವಿ. ಸುಬ್ಬಾರೆಡ್ಡಿ ವಿವರ ನೀಡಿದರು.

Exit mobile version