Site icon PowerTV

ವಿಧವೆಯ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾದ ವಿಚ್ಚೇದಿತ.!

ಚಿಕ್ಕಬಳ್ಳಾಪುರ; ವಿಧವೆಗೆ ಸಹಾಯ ಮಾಡೋ ನೆಪದಲ್ಲಿ ಮನೆಗೆ ಬಂದ ಗಂಡನ ಸ್ನೇಹಿತನೊರ್ವ ಆಕೆಗೆ ಬಾಳು ನೀಡ್ತಿನಿ ಅಂತ ಆಕೆಯನ್ನು ಪ್ರೀತಿಸಿ ಕೊನೆಗೆ ಆಕೆಯನ್ನು ಕಂಟ್ರೋಲ್ ಮಾಡಲು ನೋಡಿದ್ದ. ಆದ್ರೆ, ಆಕೆ ಆತ ಹೇಳಿದ ಹಾಗೆ ಕೇಳಲಿಲ್ಲ ಅಂತ, ಮನನೊಂದು ಆತ್ಮಹತ್ಯಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ನಗರದ 15 ನೇ ವಾರ್ಡ ಬಡಾವಣೆಯಲ್ಲಿ ನಡೆದಿದೆ.

ಮಹಿಳೆಯ ಹೆಸರು ಸುಮಾ. ಈಕೆಯ ಗಂಡ ಚಿಕ್ಕಬಳ್ಳಾಪುರ ನಗರ ಸಭೆಯಲ್ಲಿ ಬಿಲ್ ಕಲೇಕ್ಟರ್ ಆಗಿ, ಕಳೆದ ವರ್ಷ ಕೋರೊನಾ ಸೋಂಕಿಗೆ ಬಲಿಯಾಗಿದ್ದ. ಗಂಡ ಸತ್ತ ಮೇಲೆ ಸುಮಾಗೆ ಸಹಾಯ ಮಾಡಲು ಮನೆಗೆ ಬಂದ ಆಕೆಯ ಗಂಡನ ಸ್ನೇಹಿತ ಎಸ್.ಎನ್.ಪ್ರಶಾಂತ್, ಕ್ರಮೇಣ ಸುಮಾಳಿಗೆ ಬಾಳು ನೀಡುವುದಾಗಿ ಹೇಳಿ ಆಕೆಯನ್ನು ಪ್ರೀತಿ ಮಾಡಿದ್ದ. ಆದ್ರೆ, ಆಕೆ ತನ್ನನ್ನು ಬಿಟ್ಟು ಇನ್ಯಾರೋ. ಜೊತೆ ಸಲುಗೆಯಿಂದ ಇದ್ದಾಳೆ ಅಂತ ಮನನೊಂದು ನಿನ್ನೆ ತಡರಾತ್ರಿ ಸುಮಾ ಒಡೆತನದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರಶಾಂತ್

ಸಾಯುವುದಕ್ಕೂ ಮುನ್ನ ಸ್ಥಳೀಯ ನಗರಸಭೆ ಸದಸ್ಯ ಅಂಬರೀಶನೇ ನನ್ನ ಸಾವಿಗೆ ಕಾರಣ ಅಂತ ವಿಡಿಯೋ ರೆಕಾರ್ಡ್ ಮಾಡಿ ಸತ್ತಿದ್ದಾನೆ. ಇದ್ರಿಂದ ಮೃತನ ಸಂಬಂಧಿಕರು ಸುಮಾ ಹಾಗೂ ಅಂಬರೀಶನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸುಮಾ

ಸ್ಥಳೀಯ ನಗರಸಭಾ ಸದಸ್ಯ ಅಂಬರೀಶ, ಸುಮಾ ಗಂಡನ ಬಡ್ಡಿ ವ್ಯವಹಾರ ನೋಡಿಕೊಂಡರೆ. ಇತ್ತ ಮೃತ ಪ್ರಶಾಂತ್, ಸುಮಾಳ ಬೇಕಾದ ಕಡೆ ಕರೆದುಕೊಂಡು ಹೋಗಿ ಬರುತ್ತಿದ್ದನಂತೆ, ಇತ್ತೀಚಿಗೆ ಸುಮಾಳನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಬಂಧಿ ಮಾಡಿ, ಮದುವೆ ಮಾಡಿಕೊಳ್ಳೊದಾಗಿ ಹೇಳಿದ್ದ. ತಮ್ಮಿಬ್ಬರ ಪ್ರೀತಿಗೆ ಅಂಬರೀಶ ಅಡ್ಡಿಯಾಗಿದ್ದ, ಸುಮಾ ತನ್ನ ಬದಲು ಅಂಬರೀಶ ಜೊತೆ ಸಲುಗೆಯಿಂದ ಇದ್ದಾಳೆ ಅಂತ ಸುಮಾಳಿಗೆ ಟಾರ್ಚರ್ ಮಾಡುತ್ತಿದ್ದನಂತೆ.

ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ವಿಧವೆಯ ಮೇಲೆ ಕಣ್ಣು ಹಾಕಿದ ಗಂಡನ ಸ್ನೇಹಿತ. ಸಹಾಯ ಮಾಡೋ ನೆಪದಲ್ಲಿ, ಆಕೆಯನ್ನು ಪ್ರೀತಿಸಿ ಇನ್ನೇನು ಮಾಡಲು ಹೊರಟಿದ್ದನೋ ಗೊತ್ತಿಲ್ಲ. ಆದ್ರೆ, ವಿವಾಹಿತರ ಪ್ರೇಮ ಪ್ರಕರಣ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ.

ಮಲ್ಲಪ್ಪ. ಎಂ.ಶ್ರೀರಾಮ್. ಪವರ್ ಟಿವಿ. ಚಿಕ್ಕಬಳ್ಳಾಪುರ.

Exit mobile version