Site icon PowerTV

ಕಟೀಲ್​​ ವಿರುದ್ಧ ನೋಟಿಸ್​​ ಕೊಡುತ್ತೇನೆ- M.B.ಪಾಟೀಲ್

ಮಂಗಳೂರು :  KPCC ಪ್ರಚಾರ ಸಮಿತಿ ಅಧ್ಯಕ್ಷ M.B.ಪಾಟೀಲ್ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಕಳೆದ 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು BJP ನಾಯಕರು ಕೇಳುತ್ತಾರೆ ಎಂದರು.

ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಕಾಂಗ್ರೆಸ್ ನಾಯಕರ ದೂರದೃಷ್ಟಿ, ಯೋಜನೆಗೆ ಕಾರಣವಾಗಿದೆ. ದೇಶ ಇಷ್ಟೆಲ್ಲ ಅಭಿವೃದ್ಧಿ ಸಾಧಿಸಿದ್ದು 2014ರಲ್ಲಿ, ಮೋದಿ ಬಂದ ಬಳಿಕ ಅಲ್ಲ. ಕಾಂಗ್ರೆಸ್ HAL, HMTಯಿಂದ ತೊಡಗಿ ನೂರಾರು ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟಿದ್ದಾರೆ. ಕಾಂಗ್ರೆಸ್ ಪ್ರಾಥಮಿಕ ಶಾಲೆಯಿಂದ IITವರೆಗೆ, ಆರೋಗ್ಯ ಕೇಂದ್ರದಿಂದ ಏಮ್ಸ್​​​ವರೆಗೆ ಅಭಿವೃದ್ಧಿ ಮಾಡಿದೆ ಎಂದು ಹೇಳಿದರು.

ಇನ್ನು, ಕಾಂಗ್ರೆಸ್​​​ನಲ್ಲಿ ಮುಂದಿನ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿರುವ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು, ಅಭಿಮಾನಿಗಳು ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಸಿಎಂ ಆಗಲಿ ‌ಅಂತಾರೆ. ಆದರೆ ಪಕ್ಷಕ್ಕೆ‌ ಅದರದ್ದೇ ಆದ ನಿಯಮ ‌ಮತ್ತು ಸಿದ್ಧಾಂತ ಇದೆ. ನಾನು ಸಿಎಂ ಆಗಬೇಕು ಅಂದ್ರೂ ಆಗಲ್ಲ, ಶಾಸಕರ‌ ಅಭಿಪ್ರಾಯ ಅಂತಿಮವಾಗುತ್ತೆ ಎಂದು ತಿಳಿಸಿದ್ರು. ನಳಿನ್ ಕುಮಾರ್ ‌ಕಟೀಲ್​​​​ಗೆ ಮಲಪ್ರಭಾ ಯೋಜನೆ ಬಗ್ಗೆ ಗೊತ್ತಿಲ್ಲ. ಮಲಪ್ರಭಾ ಕೆನಾಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಆರೋಪ ಮಾಡಿದ್ದಾರೆ. ಕಟೀಲ್​​​ಗೆ ಮೆದುಳು ಇದ್ಯೋ ಇಲ್ಲವೋ ಗೊತ್ತಿಲ್ಲ. ನನ್ನ ವಿರುದ್ಧ 420 ಕೋಟಿ ಆರೋಪ ಮಾಡಿದ್ದಾರೆ. ಅದರ ಬಗ್ಗೆ ನನಗೆ ‌ಗೊತ್ತೇ ಇಲ್ಲ, ಹೀಗಾಗಿ ಅವರಿಗೆ ‌ಲೀಗಲ್ ನೋಟೀಸ್ ಕೊಡುತ್ತೇನೆ. ನಳಿನ್ ಕುಮಾರ್ ಪುಣ್ಯಾತ್ಮನಿಗೆ ಮಲಪ್ರಭಾ, ವಾರಾಹಿ ಬಗ್ಗೆ ಏನೆಂದು ಗೊತ್ತೇ ಇಲ್ಲ. ಎಲ್ಲಾ ದಾಖಲೆ ಇಟ್ಟು ನಳಿನ್ ‌ಕುಮಾರ್ ವಿರುದ್ಧ ಲೀಗಲ್ ನೋಟೀಸ್ ಕೊಡ್ತೇನೆ ಎಂದು BJP ರಾಜ್ಯಾಧ್ಯಕ್ಷ ನಳಿನ್ ಬಗ್ಗೆ M.Bಪಾಟೀಲ್​​​​​ ಕಿಡಿಕಾರಿದ್ದಾರೆ.

Exit mobile version