Site icon PowerTV

ಹಿಂದೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸುವ ಪ್ರಯತ್ನದ ಕೃತ್ಯ

ಚಿಕ್ಕಮಗಳೂರು: ಕಾರಿನ ಮೇಲೆ ‘Kill U You’ ಗೀಚಿ ಹಾಗೂ ಕಾರಿನ ಚಕ್ರದ ಗಾಳಿ ತೆಗೆದು ಕಿಡಿಗೇಡಿಗಳು ಚಿಕ್ಕಮಗಳೂರು ಜಿಲ್ಲಾ ಆರ್ಎಸ್ಎಸ್ ಧರ್ಮ ಜಾಗರಣ ಸಹ ಸಂಚಾಲಕ ಡಾಕ್ಟರ್ ಶ್ರೀಧರ್ ಜಯಣ್ಣ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸುವ ಪ್ರಯತ್ನ ಇದು. ಇತ್ತೀಚಿನ ದಿನಗಳಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಕೃತ್ಯಕ್ಕೆ ಕಡಿವಾಣ ರಾಜ್ಯ ಸರ್ಕಾರ ಹಾಕಬೇಕು ಎಂದು ಕಡೂರಿನಲ್ಲಿ ಹೇಳಿದರು.

ನಿನ್ನೆ ರಾತ್ರಿ ವೇಳೆ ಕೆಲವು ಜಿಹಾದಿಗಳು ನನ್ನ ಕಾರಿನ ಮೇಲೆ ಅಶ್ಲೀಲ ಪದಗಳನ್ನು ಬರೆದಿದ್ದಾರೆ. ಇಂತಹ ನೀಚ ಕೃತ್ಯವನ್ನು ಕಿಡಿಗೇಡಿಗಳು ಎಸಗಿದ್ದಾರೆ. ಹಿಂದೂ ಕಾರ್ಯಕರ್ತರ ಮನೋಸ್ಥರ್ಯ ಹೊಂದಿಸುವ ಕೆಲಸ ಇದು. ನಾನು ಶಾಂತಿಯುತವಾಗಿ ಜೀವನ ನಡೆಸಿದ್ದೇನೆ.

ಇತ್ತೀಚಿಗೆ ಹಿಂದೂ ಪರ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಇದು. ಸೂಕ್ತ ಭದ್ರತೆಗಾಗಿ ಪೊಲೀಸರನ್ನು ಸಂಪರ್ಕಿಸಿದ್ದೇನೆ ಎಂದು ಜಿಲ್ಲೆ ಕಡೂರಿನಲ್ಲಿ ಡಾಕ್ಟರ್ ಶ್ರೀಧರ ಸಿಂದಿಗೆರೆ ಜಯಣ್ಣ ಹೇಳಿದ್ದಾರೆ.

Exit mobile version