Site icon PowerTV

PFI ವಿರುದ್ಧ ಸೂಲಿಬೆಲೆ ವಾಗ್ದಾಳಿ

ರಾಯಚೂರು : ದೇಶಾದ್ಯಂತ PFI ಕಚೇರಿಗಳ ಮೇಲೆ NIA ದಾಳಿ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರಿನಲ್ಲಿ ನಡೆದ ಉಘೆ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.

ನಮಗೆ ಗೊತ್ತಿಲ್ಲದ ರೀತಿಯಲ್ಲಿ ನಮ್ಮ ಸುತ್ತಲೂ ಷಡ್ಯಂತ್ರ ನಡೀತಿದೆ ಎಂದು PFI ಸಂಘಟನೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಮುಸ್ಲೀಂ ಸಮುದಾಯದ ಬಗ್ಗೆ ವ್ಯಂಗ್ಯವಾಡಿದ್ದಾರೆ. PFI ಸಂಘಟನೆ ಮುಖ್ಯಸ್ಥ 24 ಗಂಟೆ ಸಮಯ ನೀಡಿದ್ದ. ಜೈಲಿನಿಂದ ಎಲ್ಲರನ್ನು ಬಿಡುಗಡೆ ಮಾಡದಿದ್ರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದರು.

ಇನ್ನು, ಬಸ್​ಗಳಿಗೆ ಕಲ್ಲು ಹೊಡೆಯುತ್ತೇವೆ ಅಂತಾ ಬೆದರಿಕೆ ಹಾಕಿದ್ದ. ಆಶ್ಚರ್ಯ ಅಂದ್ರೆ 24 ಗಂಟೆಯಾದ್ರೂ ಬಿಡುಗಡೆ ಮಾಡಲಿಲ್ಲ. ಯಾರು ಕೂಡ ಪ್ರತಿಭಟನೆ ಮಾಡಲಿಲ್ಲ. ಕೇರಳದಲ್ಲಿ ಪ್ರತಿಭಟನಾಕಾರರನ್ನು ಸ್ಥಳೀಯರೇ ಹೊಡೆದಿದ್ದಾರೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲು ಹೋದಾಗ PFI ಮುಖಂಡರ ವಿರುದ್ಧ ವ್ಯಾಪಾರಸ್ಥರೇ ತಿರುಗಿ ಬಿದ್ದಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.

Exit mobile version