Site icon PowerTV

ಹಲ್ಲೆಗೊಳಗಾದ ಸಿಪಿಐ ಆರೋಗ್ಯ ವಿಚಾರಿಸಿದ ಸಂಸದ ಉಮೇಶ್ ಜಾಧವ್​​

ಕಲಬುರಗಿ; ಮಹಾರಾಷ್ಟ್ರದ ತರೂರಿ ಗ್ರಾಮದಲ್ಲಿ ಗಾಂಜಾ ದಂಧೆಕೋರರು ಸಿಪಿಐ ಶ್ರೀಮಂತ್ ಇಲ್ಲಾಳ್ ಅವರ ಮೇಲೆ ಹಿನ್ನಲೆಯಲ್ಲಿ ಇಂದು ಕಲಬುರಗಿ ಬಿಜೆಪಿ ಸಂಸದ ಡಾ ಉಮೇಶ್ ಜಾಧವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಕಲಬುರಗಿ ಜಿಲ್ಲೆಯ ಕಮಲಾಪುರ ಠಾಣೆ ಇನ್ಸ್ಪೆಕ್ಟರ್ ಶ್ರೀಮಂತ್ ಇಲ್ಲಾಳ ಅವರನ್ನ ನಿನ್ನೆ ಮಹಾರಾಷ್ಟ್ರದ ಉಮ್ಮರ್ಗಾ ಬಳಿ ತರೂರಿ ಬಳಿ ಗಂಜಾ ದಂಧೆಕೋರರ 30 ರಿಂದ 40 ಜನರ ತಂಡ ಅಟ್ಯಾಕ್ ಮಾಡಿ ಮನಸೋ ಇಚ್ಚೆ ಹಲ್ಲೆಮಾಡಲಾಗಿತ್ತು.

ಸಿಪಿಐ ಶ್ರೀಮಂತ್ ಇಲ್ಲಾಳ್ ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳು ಸಿಪಿಐಗೆ ಯಾವುದೇ ಕುಂದುಕೊರತೆಯಾಗದಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಸಂಸದ ಡಾ ಉಮೇಶ್ ಜಾಧವ್ ಹೇಳಿದರು.

ಈ ವೇಳೆ ಕುಟುಂಬಸ್ಥರನ್ನ ಭೇಟಿಯಾಗಿ ಉಮೇಶ್ ಜಾಧವ್​ ಧೈರ್ಯ ತುಂಬಿದರು. ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಸಿಪಿಐಯನ್ನ ಹೈದ್ರಾಬಾಸ್​-ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗುವುದು ಎಂದು ಕುಟುಂಬಸ್ಥರಿಗೆ ಸಂಸದರು ತಿಳಿಸಿದ್ದಾರೆ.

Exit mobile version