Site icon PowerTV

ಕೇರಳದ ಮಾಜಿ ಸಚಿವ ಆರ್ಯಾಡನ್​​​ ನಿಧನ

ಕೇರಳ : ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆರ್ಯಾಡನ್ ಮುಹಮ್ಮದ್ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ ಕೇರಳದ ಕೋಯಿಕ್ಕೋಡ್​​​​ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ನಿಲಂಬೂರಿನ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಾಳೆ ಬೆಳಗ್ಗೆ 9ಗಂಟೆಗೆ ನಿಲಂಬೂರು ಮೂಕಟ್ಟವಲಿಯ ಜುಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಉಣ್ಣೀನ್ ಮತ್ತು ಕದಿಯುಮ್ಮ ಅವರ ಒಂಬತ್ತು ಮಕ್ಕಳಲ್ಲಿ ಎರಡನೆಯವರಾದ ಆರ್ಯಾಡನ್ 1935 ಮೇ 15ರಂದು ಜನಿಸಿದ್ದು ನಿಲಂಬೂರು ಸರ್ಕಾರಿ ಮಾನವವೇದನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ಶಾಲಾ ಫುಟ್ಬಾಲ್ ತಂಡದ ನಾಯಕರಾಗಿದ್ದರು.

Exit mobile version