Site icon PowerTV

ಶಾಲಾ ಆವರಣದಲ್ಲಿ ಮರ ಬಿದ್ದು ಯುವಕ ಮೃತ್ಯು

ಬೀದರ್: ಶಾಲಾ ಆವರಣದಲ್ಲಿ ಮರ ಕಡಿಯುತ್ತಿದ್ದ ವೇಳೆಯಲ್ಲಿ ಮರ ಬಿದ್ದು ವ್ಯಕ್ತಿವೊಬ್ಬ ಮೃತಪಟ್ಟ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆದಿದೆ.

ಶಾಲೆಯ ಮುಖ್ಯೋಪಾಧ್ಯಾಯಿ ನಿರ್ಮಲಾ ಅವರು ಮರ ಕಡಿಯಲು‌ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಮರ ಕಡಿದು ಸಾಗಿಲು ಮರ ಕಡಿಯುವವರಿಗೆ ಅನುಮತಿ ಕೊಟ್ಟಿದ್ದರು. ಮರ ಕಡಿಯುವ ವೇಳೆಯಲ್ಲಿ ಇದ್ದಕ್ಕಿದ್ದ ಹಾಗೆ ಮರ ಬಿದ್ದು ಯುವಕ ಸಿದ್ದಪ್ಪ ವಿಶ್ವನಾಥ ಸಾವನ್ನಪ್ಪಿದ್ದಾನೆ.

ಇನ್ನು ಮುಖ್ಯಾಪಾಧ್ಯಾಯೇ ಅಜಾಗರೂಕತೆಯ ನಿರ್ಣಯಕ್ಕೆ ಸ್ಥಳಿಯರ ಅಕ್ರೋಶ ವ್ಯಕ್ತಪಡಿಸಿ, ಶಾಲಾ ಮುಖ್ಯಗುರು ನಿರ್ಮಲಾ ಅವರು ಮರ ಮಾರಾಟ ಮಾಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎಂದು ಕಿಡಿಕಾರಿದ್ದಾರೆ.

ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ‌ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಮರಣೋತ್ತರ ಪರೀಕ್ಷೆಗೆ ಶವ ಸಾಗಾಟ ಮಾಡಿದ್ದಾರೆ. ಈ ಬಗ್ಗೆ ಧನ್ನೂರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದು ರವಿವಾರ ಆದ್ದರಿಂದ ಶಾಲೆಯ ಮಕ್ಕಳು ಇಲ್ಲದೆ ‌ಇರುವುದರಿಂದ ಭಾರಿ ದುರಂತ ತಪ್ಪಿದೆ.

Exit mobile version