Site icon PowerTV

ಇವರೆಲ್ಲರೂ ಸತ್ಯ ಹರಿಶ್ಚಂದ್ರರಾ? : ಸಚಿವ ಸುಧಾಕರ್

ಬೆಂಗಳೂರು : PayCM ಅಭಿಯಾನದ ಕುರಿತು ಸಚಿವ ಸುಧಾಕರ್​ ಮಾತನಾಡಿ ಕಾಂಗ್ರೆಸ್‌ನವರು ಇಷ್ಟು ಕೆಳ ಹಂತಕ್ಕೆ ಹೋಗಿ ರಾಜಕೀಯ ಮಾಡೋದ್ರಲ್ಲಿ ನಿಸ್ಸೀಮರು. ಈ ಮೂಲಕ ಕಾಂಗ್ರೆಸ್ ದೇಶದ ಮುಂದೆ ಬೆತ್ತಲಾಗಿದೆ ಎಂದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಅನೇಕರಿಗೆ ವಯಸ್ಸಾಗಿದೆ. ಹೇಗಾದ್ರೂ ಮಾಡಿ ವೈಯಕ್ತಿಕ ಲಾಭಕ್ಕೊಸ್ಕರ ಪೇ ಸಿಎಂ ಅಂತ ಮಾಡಿದ್ದಾರೆ. ನಟ ಅನಿಲ್ ಅಯ್ಯರ್ ನನ್ನ ಅನುಮತಿ ಇಲ್ಲದೇ ನನ್ನ ಪೋಟೊ ಬಳಸಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ರಾಜಕೀಯ ದುರುದ್ದೇಶದ ಅಭಿಯಾನ ಇದು ಇವರೆಲ್ಲರೂ ಸತ್ಯ ಹರಿಶ್ಚಂದ್ರರಾ? ಎಂದರು.

ಅದಲ್ಲದೇ, ಎಷ್ಟು ಜನ ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದಿದ್ದಾರೆ. ಎಷ್ಟು ಜನ ಬೇಲ್‌ನಲ್ಲಿದ್ದಾರೆ. ನಾಚಿಕೆ ಆಗಲ್ವಾ ಅವ್ರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ. ಅವರ ಹಿರಿಯ ನಾಯಕರೇ ಬೇಲ್ ಮೇಲೆ ಇದ್ದಾರೆ. ಭ್ರಷ್ಟಾಚಾರದ ಕಾರಣ ಸರ್ಕಾರಗಳನ್ನೇ ಕಳೆದುಕೊಂಡಿದ್ದಾರೆ. ಯಾವ ನೈತಿಕತೆ ಇದೆ ಅವ್ರಿಗೆ ಈ ಬಗ್ಗೆ ಮಾತನಾಡೋಕೆ ಬಹಳ ಜೋರಾಗಿ ಮಾತನಾಡಿದ್ರೆ,ಪದೇ ಪದೇ ಮಾತನಾಡಿದ್ರೆ ಜನ ನಂಬುತ್ತಾರೆ ಅಂತ ಅಂದುಕೊಂಡಿದ್ದಾರೆ. ಆದರೆ ಜನ ಮೂರ್ಖರಲ್ಲ ಎಂದರು.

Exit mobile version