Site icon PowerTV

ಪೇ ಸಿಎಂ ಅಂದರೆ, ಪೇ ಕಾಂಗ್ರೆಸ್ ಮೇಡಂ : ಪ್ರತಾಪ್ ಸಿಂಹ

ಬೆಂಗಳೂರು : ಪೇ ಸಿಎಂ ಅಂದರೆ, ಪೇ ಕಾಂಗ್ರೆಸ್ ಮೇಡಂ ಅಂತ ಕಾಂಗ್ರೆಸ್‍ನವರೇ ಪ್ರೂವ್ ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್‍ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‍ನಿಂದ ಪೇ ಸಿಎಂ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಪೇ ಸಿಎಂ ಅಂದ್ರೆ ಪೇ ಕಾಂಗ್ರೆಸ್ ಮೇಡಂ ಅಂತ. ರಾಜಕಾರಣದಲ್ಲಿ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೊಡೆದಾಡಬೇಕು. ನಾನು ಜಾಸ್ತಿ ಅಭಿವೃದ್ಧಿ ಕೆಲಸ ಮಾಡುತ್ತೇನೆ, ನಾನು ಜಾಸ್ತಿ ಮಾಡುತ್ತೇನೆ ಎಂಬ ಹಠ ಇರಬೇಕು ಎಂದರು.

ಅದಲ್ಲದೇ, ಬಿಟ್ಟು ಜಾತಿ-ಜಾತಿ ಎತ್ತಿಕಟ್ಟುವುದು, ಇನ್ನೊಬ್ಬರನ್ನು ಅವಾಚ್ಯ ಶಬ್ದದಿಂದ ನಿಂದಿಸುವುದು. ಪರಸ್ಪರ ವೈಯಕ್ತಿಕ ನಿಂದನೆ ಮಾಡಿಕೊಳ್ಳುವುದು, ಇದೆಲ್ಲಾ ಹಳೆ ಕಾಲದಿಂದ ನಡೆದುಕೊಂಡು ಬಂದಿರುವ ರಾಜಕಾರಣ. ಈಗ ಕೂಡ ಕೆಲವರು ಅದನ್ನೇ ಮುಂದುವರಿಸುತ್ತಿದ್ದಾರೆ. ಜನರು ದಡ್ಡರಲ್ಲ, ಬುದ್ದಿವಂತರಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಬೇಕು ಅಷ್ಟೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

Exit mobile version