Site icon PowerTV

ಹಸುವಿನ ಮೇಲೆ ಪಿಟ್ ಬುಲ್ ದಾಳಿ

ನಾಯಿ ಸಾಕುವ ಮಂದಿ ದಿನೇ ದಿನೇ ಹೆಚ್ಚುತ್ತಿದ್ದಾರೆ. ಸೆಕ್ಯುರಿಟಿಗೋ, ಪ್ರೀತಿಗೋ, ಯಾವುದೋ ಒಂದು ಕಾರಣಕ್ಕೆ ಮನೆಯಲ್ಲಿ ನಾಯಿಯಂತೂ ಇದ್ದೇ ಇರುತ್ತೆ. ಅಂತಹ ನಾಯಿಗಳಲ್ಲಿ ಪಿಟ್ ಬುಲ್ ಕೂಡ ಒಂದು. ಪ್ರಪಂಚದ ವಿಶೇಷ ಶ್ವಾನಗಳ ಪಟ್ಟಿಗೆ ಸೇರುವ ಈ ಪಿಟ್ ಬುಲ್ ಸ್ವಲ್ಪ ಡೇಂಜರಸ್​ ಇತ್ತೀಚೆಗೆ ಸಾಕುನಾಯಿ ಪಿಟ್​ಬುಲ್​ ದಾಳಿ ಮಾಡಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಇನ್ನು,  ವೈರಲ್​ ಆದ ವಿಡಿಯೋದಲ್ಲಿ ಪಿಟ್​ಬುಲ್​ ನಾಯಿ ಹಸುವಿನ ಮೇಲೆ ದಾಳಿ ಮಾಡಿದೆ. ಸುತ್ತ-ಮುತ್ತಲಿನ ಜನ ಎಷ್ಟೇ ಪ್ರಯತ್ನಿಸಿದರೂ ಸಹ ಆ ಶ್ವಾನ ಹಸುವನ್ನ ಬಿಗಿಯಾಗಿ ಕಚ್ಚಿ ಹಿಡಿದಿದೆ. ಹಸುವಿನ ಬಾಯಿಯನ್ನು ಕಚ್ಚಿ ಹಿಡಿದ ಪಿಟ್​ಬುಲ್​ ಜನ ಎಷ್ಟು ಹೊಡೆದರೂ ಬಿಡುವುದಿಲ್ಲ. ಇದು ಪಿಟ್​ಬುಲ್​ ನಾಯಿಯನ್ನು ಕೊಳ್ಳುವ ಮುಂಚೆ ಯೋಚಿಸುವಂತೆ ಮಾಡಿದೆ.

Exit mobile version