Site icon PowerTV

ಪ್ರೀತಿಸಿ ಮದುವೆಯಾಗಿ ಒಂದೇ ವರ್ಷಕ್ಕೆ ಕೈಕೊಟ್ಟ ಪತಿರಾಯ

ಮೈಸೂರು : ಮೈಸೂರಿನಲ್ಲಿ ಪ್ರೀತಿಸಿ ಮದುವೆಯಾಗಿ ಒಂದೇ ವರ್ಷಕ್ಕೆ ಪತಿರಾಯ ಕೈಕೊಟ್ಟಿದ್ದಾನೆ. ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್ ಮತ್ತು ಅಶ್ವಿನಿ ಜೂನ್ 2021 ರಲ್ಲಿ ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರ ಪ್ರೀತಿಗೆ ಇಬ್ಬರ ಕುಟುಂಬಸ್ಥರಿಂದ ಒಪ್ಪಿಗೆಯೂ ದೊರೆತು ಮದುವೆಯಾದರು.

ಒಂದೇ ವರ್ಷಕ್ಕೆ ಮನೆಯವರೆಲ್ಲಾ ಸೇರಿ ಇಬ್ಬರನ್ನು ಬೇರ್ಪಡಿಸುವ ಕೆಲಸವನ್ನು ಮಾಡಿದ್ದಾರೆ.ಅಶ್ವಿನಿ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ವಾಟ್ಸಾಪ್ ನಲ್ಲಿ ಬೆತ್ತಲೆ ಫೋಟೋ ಹಾಕುತ್ತಿದ್ದಾಳೆಂದು ಕಿರುಕುಳ ನೀಡಿದ್ದಾರೆ. ಇದರ ಜೊತೆಗೆ ದಲಿತ ಹುಡುಗಿ ಎಂದು ಕೊಟ್ಟಿಗೆಯಲ್ಲಿ ಇರಿಸಿದ್ದಾರೆ. ನ್ಯಾಯ ಕೇಳಲು ಹೋದ ಅಶ್ವಿನಿಗೆ ಅತ್ತೆ ಮಾವ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಇನ್ನು, ಪ್ರೀತಿಸಿ ಮದುವೆಯಾದರು ಸಹ ಗಂಡನ ಬೆಂಬಲ ಸಿಗದೇ ಗಂಡ ಹಾಗೂ ಮನೆಯವರಿಂದ ತ್ಯಜಿಸಲ್ಪಟ್ಟ ಅಶ್ವಿನಿ ಇದೀಗ ಅತಂತ್ರಕ್ಕೆ ಸಿಲುಕಿದ್ದಾರೆ.ಪ್ರೀತಿಸಿ ಮದುವೆ ಆದ ಗಂಡನಿಗಾಗಿ ಅಶ್ವಿನಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾಳೆ. ಅಶ್ವಿನಿಯ ಹೆತ್ತವರು ಮಗಳ ಪರಿಸ್ಥಿತಿಗೆ ಕಣ್ಣೀರಿಡುತ್ತಿದ್ದಾರೆ.

Exit mobile version