Site icon PowerTV

ಅಜರಾಮರ ಅಪ್ಪುವಿನ ಗಂಧದ ಗುಡಿ ಸಿನೆಮಾ ಪೋಸ್ಟರ್ ಗೆ ಕ್ಷೀರಾಭಿಷೇಕ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ದೊಡ್ಮನೆ ಹುಡುಗರು ವತಿಯಿಂದ ಒಂದು ತಿಂಗಳ ಮುಂಚಿತವಾಗಿ ಗಂಧದ ಗುಡಿ ಚಲನಚಿತ್ರದ ಸಂಭ್ರಮಾಚರಣೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಅಭಿಮಾನಿಗಳು ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸಿದರು.

ಈ ವೇಳೆ ಅಪ್ಪು ಅಭಿಮಾನಿ ಶೇಖರಯ್ಯ ಮಠಪತಿ ದೀಪ ಬೆಳಗಿದರೆ, ಅಭಿಮಾನಿಗಳಾದ ಮಂಜುನಾಥ ಯರಗಂಬಳ್ಳಿಮಠ ಶಿವು ಮೇಟಿ ಮಂಜುನಾಥ ಅರಕೇರಿ ಅಜಿತ್ ಬೈರಾಗಿ ರಾಜು ಅರಕೇರಿ ರಾಮು ಗಣೇಶ ಅಮರ್ ಸಿದ್ದಪ್ಪ ಹಾಗೂ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ಇನ್ನು ಈಗಾಗಲೇ ಅಪ್ಪುವಿನ ಕೊನೆ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು ಅಭಿಮಾನಿಗಳ ಈ ಕ್ರೇಜ್ ಮುಂದಿನ ದಿನಗಳಲ್ಲಿ ಹೆಚ್ಚಾಗುವುದರಲ್ಲಿ ಸಂಶಯ ಇಲ್ಲಾ ಎನ್ನುವಂತಿದೆ

Exit mobile version