Site icon PowerTV

ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ದರ ಹೆಚ್ಚಳ ಶಾಕ್

ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವೂ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ 46 ಪೈಸೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಪ್ರತಿ ವರ್ಷವೂ ಫೂಯೆಲ್ ಕಾಸ್ಟ್ ಅಡ್ಜೆ‌ಸ್ಟ್‌ಮೆಂಟ್‌ಗೆಂದು (FAC) ದರ ಹೆಚ್ಚಳ ಮಾಡಲಾಗುತ್ತದೆ. ಈ ದರ ಪ್ರತಿ ಯೂನಿಟ್‌ಗೆ ಏರಿಕೆಯಾಗುವ ಅಥ್ವಾ ಇಳಿಕೆಯಾಗುವ ಸಾಧ್ಯತೆ ಇರುತ್ತೆ. ಕಳೆದ ಬಾರಿ ಪ್ರತಿ ಯೂನಿಟ್‌ಗೆ 30 ಪೈಸೆ ಇಳಿಕೆಯಾಗಿತ್ತು. ಈ ಬಾರಿ 46 ಪೈಸೆ ಏರಿಕೆ ಸಾಧ್ಯತೆ ಇದೆ.

ಇನ್ನು, 3 ತಿಂಗಳು ( FAC) ದರ ಹೆಚ್ಚಳವು ಮುಂಬರುವ ಕರೆಂಟ್ ಬಿಲ್‌ನಲ್ಲಿ ಪರಿಷ್ಕರಣೆಯಾಗಲಿದೆ. 3 ತಿಂಗಳ ಬಳಿಕ ದರ ಕಡಿಮೆಯಾಗಬಹುದು ಅಥ್ವಾ ಎಂದಿನಂತೆ ಇರಬಹುದು.
ಬೆಸ್ಕಾಂ‌ನಿಂದ 80.04 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ
ಮೆಸ್ಕಾಂನಿಂದ 55.68 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ
ಸೆಸ್ಕಾಂನಿಂದ 70.61 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ
ಹೆಸ್ಕಾಂನಿಂದ 81.78 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ

ಜೆಸ್ಕಾಂನಿಂದ 57.96 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಮಾಡಲಾಗಿದ್ದು, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಮೂರು ತಿಂಗಳ ಕಾಲ ಪರಿಷ್ಕರಣೆ ಮಾಡಿದ ದರ ಇರಲಿದೆ.

Exit mobile version