Site icon PowerTV

ಸರ್ಕಾರಿ ನೌಕರಿ; ಹಣ ಪಡೆಯುತ್ತಿದ್ದ ವ್ಯಕ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಯುವಕರು

ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿಯನ್ನ ಯುವಕರ ಪಡೆಯೊಂದು ಪೊಲೀಸರಿಗೆ ಒಪ್ಪಿಸಿದ ಘಟನೆ ವಿಜಯಪುರ ‌ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ.

ಹೋಂ ಗಾರ್ಡ್ ಆಗಿರುವ ಶಾಂತೇಶ್ ಕೊರ್ತಿ ಎಂಬಾತನನ್ನು ಹಿಡಿದು ಯುವಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸರ್ಕಾರಿ ನೌಕರಿ ಕೊಡಿಸೋದಾಗಿ ಹೇಳಿ 8 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 2 ಲಕ್ಷ ರೂ ಹಣ ಪಡೆಯುವಾಗ ಶಾಂತೇಶ್​ನನ್ನ ಯುವಕರ ಪಡೆ ಹಿಡಿದು ಪೊಲೀಸರಿಗೆ ಒಪ್ಪಿಸಿದೆ.

ಶ್ರೀಕಾಂತ ಎಂಬುವವರ ಬಳಿ ಶಾಂತೇಶ್ ಕೊರ್ತಿ ಹಣ ಪಡೆಯಲು ಬಂದಿದ್ದ, ಈ ವೇಳೆಯಲ್ಲಿ ಕೃಷ್ಣ ಎನ್ನುವವರ ಸೂಚನೆ ಮೇರೆಗೆ ಹಣ ಪಡೆಯಲು ಬಂದಿದ್ದಾಗಿ ಹೇಳಿಕೆಯನ್ನ ಶಾಂತೇಶ್​ ನೀಡಿದ್ದಾನೆ. ಯುವಕರ ತಂಡ ಹಣ ನೀಡುವುದಾಗಿ ಕರೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಮೆರೆಗೆ ಸರ್ಕಾರಿ ನೌಕರಿ ಕೊಡಿಸೋದಾಗಿ ಹೇಳಿದ ವ್ಯಕ್ತಿಗಳ ಬಂಧನವಾಗಿದ್ದಾರೆ.

Exit mobile version