Site icon PowerTV

ಆಯುಧ ಪೂಜೆ ಅಲಂಕಾರಕ್ಕೆ ಪುಡಿಗಾಸು ಹಣ ಬಿಡುಗಡೆ ಮಾಡಿದ BMTC.?

ಬೆಂಗಳೂರು: ಆಯುಧ ಪೂಜೆ ಹಬ್ಬದ ದಿನ ಬಿಎಂಟಿಸಿ ಬಸ್​ ಸ್ಚಚ್ಚತೆ, ಅಲಂಕಾರಕ್ಕೆ ಕೇವಲ ಪುಡಿಗಾಸು ಬಿಡುಗಡೆ ಮಾಡಿ ಬಿಎಂಟಿಸಿ ಕೈತೊಳೆದುಕೊಂಡಿದೆ.

ಅಕ್ಟೋಬರ್ 4 ರಂದು ಆಯುಧ ಪೂಜೆ ಮಾಡಲು ತಲಾ ಒಂದು ಬಸ್​​ಗೆ 100 ಕೂ, ಜೀಪು, ಕಾರ್ಗೆ 40 ರೂ ಬಿಎಂಟಿಸಿ ಬಸ್​ ಚಾಲಕರು ಖರ್ಚು ಮಾಡಬೇಕೆಂದು ಪುಡಿಗಾಸು ಹಣ ನೀಡಿ ಕೈತೊಳೆದುಕೊಂಡಿದ್ದು, ಚಾಲಕ ಹಾಗೂ ನಿರ್ವಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾರಿಗೆ ಇಲಾಖೆ ನೀಡುವ ಪುಡಿಗಾಸಿನಲ್ಲಿ ಹಣದಲ್ಲಿ ಬಿಎಂಟಿಸಿ ಬಸ್ಸಿನ ಸ್ವಚ್ಚತೆ, ಅಲಂಕಾರ ಮತ್ತು ನಿರ್ವಹಣೆ ಆಗುತ್ತಾ ಎಂದು ಬಿಎಂಟಿಸಿ ಸಿಬ್ಬಂದಿಗಳು ಬಿಎಂಟಿಸಿ ಆಡಳಿತ ಮಂಡಳಿಯ ಜಿಪುಣತೆಗೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬಿಎಂಟಿಸಿ ಬಸ್​ ಆಡಳಿತ ಮಂಡಳಿ ನೀಡಿದ ನೀಡಿದ ಹಣದಲ್ಲಿ ಆರು ನಿಂಬೆಹಣ್ಣು ಕೂಡ ಬರೋದಿಲ್ಲ ಅಂತ ನೌಕರರು ತಮ್ಮ ಆಳಲು ತೋಡಿಕೊಂಡಿದ್ದಾರೆ. ಈ ಮೂಲಕ ಬಿಎಂಟಿಸಿಯಲ್ಲಿ ಸರಳ ಆಯುಧ ಪೂಜೆ ನಡೆಯಲಿದೀಯಾ, ಅಥವಾ ಮತ್ತಷ್ಟು ಹಣ ಬಿಎಂಟಿಸಿ ಮಂಡಳಿ ಬಿಡುಗಡೆ ಮಾಡಲಿದ್ದೀಯಾ ಕಾದುನೋಡಬೇಕಿದೆ.

Exit mobile version