Site icon PowerTV

ಯೋಗಿ ಸರ್ಕಾರ ಮುಸ್ಲಿಂಮರನ್ನು ಟಾರ್ಗೆಟ್​ ಮಾಡ್ತಿದೆ

ರಾಜ್ಯದ ಕೆಲವು ಭಾಗಗಳಲ್ಲಿ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳು ಅಥವಾ ಮದರಸಾಗಳನ್ನು ಸಮೀಕ್ಷೆ ಮಾಡುವ ಉತ್ತರ ಪ್ರದೇಶ ಸರ್ಕಾರದ ಆದೇಶಕ್ಕೆ ಅಸಾದುದ್ದೀನ್ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ.

ಯುಪಿ ಸರ್ಕಾರವು ವಕ್ಫ್ ಆಸ್ತಿಗಳ ಸಮೀಕ್ಷೆಯನ್ನು ಏಕೆ ನಡೆಸುತ್ತಿದೆ. ಹಿಂದೂ ದತ್ತಿ ಮಂಡಳಿ ಆಸ್ತಿಗಳಿಗೂ ಇದನ್ನು ಮಾಡಿ. ಮದರಸಾಗಳ ಸಮೀಕ್ಷೆಯ ಹಿಂದೆ ಷಡ್ಯಂತ್ರವಿದೆ ಎಂದು ನಾನು ಹೇಳುತ್ತಿದ್ದೆ. ಇದು ಮುನ್ನೆಲೆಗೆ ಬರುತ್ತಿದೆ. ಯುಪಿ ಸರ್ಕಾರ 300 ನೇ ವಿಧಿಯನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದರು.

ಇನ್ನು, ಯಾರಾದರೂ ಅಕ್ರಮವಾಗಿ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನೋಂದಾಯಿಸಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಹೋರಾಡಿ, ನ್ಯಾಯಾಧಿಕರಣಕ್ಕೆ ಹೋಗಿ. ಯುಪಿ ಸರ್ಕಾರ ವಕ್ಫ್ ಆಸ್ತಿಯನ್ನು ಗುರಿಯಾಗಿಸಿಕೊಂಡು ಅದನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ. ಇಂತಹ ಉದ್ದೇಶಿತ ಸಮೀಕ್ಷೆಯು ಸಂಪೂರ್ಣವಾಗಿ ತಪ್ಪು. ನಾವು ಅದನ್ನು ಖಂಡಿಸುತ್ತೇವೆ. ಇದು ಮುಸ್ಲಿಮರನ್ನು ವ್ಯವಸ್ಥಿತವಾಗಿ ಗುರಿಯಾಗಿಸುವುದು ಎಂದು AIMIM ಮುಖ್ಯಸ್ಥರು ಹೇಳಿದ್ದಾರೆ.

Exit mobile version