Site icon PowerTV

ಪಿಎಫ್​ಐ-ಎಸ್​​ಡಿಪಿಐ ಮೇಲೆ ಖಚಿತ ಮಾಹಿತಿ ಮೇರೆಗೆ ಎನ್‌ಐಎ ದಾಳಿ; ಗೃಹ ಸಚಿವರು

ಬೆಂಗಳೂರು: ಪಿಎಫ್​ಐ ಹಾಗು ಎಸ್​​ಡಿಪಿಐ ಮೇಲೆ ಎನ್‌ಐಎ ಹಾಗೂ ಇಡಿ ದಾಳಿ ಬಗ್ಗೆ ಗೃಹ ಸಚಿವ ಆರಗ ಜ್ಱನೇಂದ್ರ ಮಾತನಾಡಿದ್ದಾರೆ.

ಪಿಎಫ್​ಐ ಹಾಗು ಎಸ್​​ಡಿಪಿಐ ಮೇಲೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಲಾಗಿದೆ. ಏಕತೆ‌, ಸಮಗ್ರತೆ ಹಾಳು ಮಾಡೋ, ಜೀವಹಾನಿ ಮಾಡುವ ಸಂಘಟನೆಗಳ ಇದರ ಹಿಂದೆ ಇದೆ. ಮಾಹಿತಿಯ ಮೇರೆಗೆ ದಾಳಿ ಆಗಿದೆ. ಅವರನ್ನು ಈಗ ವಶಕ್ಕೆ ಪಡೆಯಲಾಗಿದೆ ಎಂದರು.

ಪಿಎಫ್​ಐ ಹಾಗು ಎಸ್​​ಡಿಪಿಐ ವಿವಿಧ ಕಡೆ ದೇಶದಲ್ಲಿ ಹತ್ಯೆಗಳ ಕೃತ್ಯಗಳಲ್ಲಿ ಭಾಗಿಯಾಗಿದೆ. ಇನ್ನು ನಾನು ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು. ಶಿವಮೊಗ್ಗ ಪ್ರಕರಣದಲ್ಲಿ ಬಾಂಬ್ ತಯಾರು ಮಾಡಲಾಗಿತ್ತು. ಅದನ್ನು ಟ್ರಯಲ್ ಕೂಡ ಮಾಡಿದ್ದಾರೆ. ಅವರ ಬಂಧನದಿಂದ ರಕ್ತಹಾನಿ ಜೀವಹಾನಿ ತಡೆಗಟ್ಟಲಾಗಿದೆ.

ದೇಶದಲ್ಲಿ ಎಲ್ಲರೂ ಕಾನೂನು ಪಾಲಿಸಬೇಕು. ತಪ್ಪಿತಸ್ಥರು ಅಲ್ಪಸಂಖ್ಯಾತರ ಅಲ್ವಾ ಅಂತ ಪೊಲೀಸರು ನೋಡಿ ಕೆಲಸ ಮಾಡೋದಕ್ಕೆ ಆಗಲ್ಲ. ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷದವರು, ದೇಶದ ದೃಷ್ಟಿಯಿಂದ ಮುಂದಿನ ಯೋಚನೆ ಮಾಡಬೇಕು. ಸಂಘಟನೆ ಬ್ಯಾನ್ ಆದ್ರೆ ವ್ಯಕ್ತಿಗಳ ರಾಕ್ಷಸ ಮನೋಭಾವ ಬದಲಾಗೋದಿಲ್ಲ. ಶಿವಮೊಗ್ಗದ ಶಾರಿಕ್ ಸ್ಯಾಟಲೈಟ್ ಫೋನ್‌ನಲ್ಲಿ ಮಾತನಾಡಿದ್ದಾನೆ. ತಲೆಮರೆಸಿಕೊಂಡಿರೋ ಆತನನ್ನು ಹಿಡಿಯಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದರು.

Exit mobile version