Site icon PowerTV

ಸಿದ್ದರಾಮಯ್ಯ ಸದ್ಯದಲ್ಲೇ ಅರೆಸ್ಟ್ ಆಗ್ತಾರೆ : ನಳೀನ್​ ಕುಮಾರ್​ ಕಟೀಲ್

ಬೆಂಗಳೂರು : PAYCM ಪೋಸ್ಟರ್ ಕೇಸ್​ನಲ್ಲಿ ಅರೆಸ್ಟ್ ಮಾಡಿ ಎಂದು ಸಿದ್ದರಾಮಯ್ಯ ಸವಾಲ್ ಹಾಕಿರುವ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ದಾಖಲೆಗಳನ್ನ ರೆಡಿ ಮಾಡಿದ್ದೀವಿ. ಸಿದ್ದರಾಮಯ್ಯ ಸದ್ಯದಲ್ಲೇ ಅರೆಸ್ಟ್ ಆಗ್ತಾರೆ. ಕೋರ್ಟ್ ಮೂಲಕವೇ ಅವ್ರನ್ನ ಅರೆಸ್ಟ್ ಮಾಡ್ತೀವಿ ಕಾದು ನೋಡಿ. ಕಾಂಗ್ರೆಸ್ ದೇಶದಲ್ಲಿ ಭ್ರಷ್ಟಾಚಾರಕ್ಕೆ ಕೊಡುಗೆ ಕೊಟ್ಟಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಬಿಟ್ತೆ, ಬೇರೆ ಎಲ್ಲ ಪ್ರಧಾನ ಮಂತ್ರಿಗಳು ಭ್ರಷ್ಟಾಚಾರ ಹಗರಣದಲ್ಲಿ ಲುಕಿದವರೇ. ನ್ಯಾಷನಲ್ ಹೆರಾಲ್ಡ್ ಹಾಗೂ ಡಿಕೆಶಿ ಹಗರಣಗಳನ್ನು ಮರೆಸಲು, ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್​​ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡಲು ನೈತಿಕತೆ ಇಲ್ಲ. ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು, ಮತ್ತೊಂದು ಆಪಾದನೆ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version