Site icon PowerTV

ಭಾರತ್ ಜೋಡೋ ಬದಲು ‘ಕೈ’ ಜೋಡೋ ಮಾಡಿ : ನಳಿನ್​​ ಕುಮಾರ್ ಕಟೀಲ್

ಬೆಂಗಳೂರು : ದೇಶವನ್ನು ವಿಭಜನೆ ಮಾಡಿದ್ದ ಕಾಂಗ್ರೆಸ್​ನ​ ಪಾಪದ ಕೊಡ ತುಂಬಿದೆ. ಹಾಗಾಗಿ ಪಾಪದ ಕೈಯನ್ನು ತೊಳೆದುಕೊಳ್ಳಲು ಭಾರತ್​ ಜೋಡೋ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್​ ಪಕ್ಷ ಭಾರತ್ ಜೋಡೋ ಯಾತ್ರೆ ಬದಲಿಗೆ ಕಾಂಗ್ರೆಸ್ ಜೋಡೋ ಮಾಡುವ ಅವಶ್ಯಕತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ನಲ್ಲಿ ಈಗ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಪಕ್ಷವನ್ನು ಸ್ಥಿರ ಮಾಡುವ ಬದಲು ರಾಹುಲ್ ಗಾಂಧಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಎರಡು ತುಂಡಾಗಿದೆ. ಮೊದಲಿಗೆ ಭಾರತ್​ ಜೋಡೋ ಬದಲಿಗೆ ಕಾಂಗ್ರೆಸ್​​ ಜೋಡೋ ಆಗಲಿ ಎಂದು ಹೇಳಿದರು.

ಇನ್ನು, ಸಿದ್ದರಾಮಯ್ಯ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಆಸಕ್ತಿ ಕಳೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೋದಲ್ಲೆಲ್ಲಾ ಕಾರ್ಯಕರ್ತರಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ಅವರ ಹೇಳಿಕೆಗಳು ಆಂತರಿಕ ಗೊಂದಲವನ್ನು ಸೃಷ್ಟಿಸುತ್ತಿವೆ. ಇದರ ಜೊತೆ ಐಟಿ ನೋಟಿಸ್, ಭ್ರಷ್ಟಾಚಾರದಿಂದ ಯಾರು ಯಾವಾಗ ಜೈಲಿಗೆ ಹೋಗ್ತಾರೋ ಅನ್ನೋ ಆತಂಕ ಇದೆ. ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್​ಗೆ ಲಾಭವಿಲ್ಲ, ಬಿಜೆಪಿಗೆ ನಷ್ಟವು ಇಲ್ಲ ಎಂದು ಹೇಳಿದರು.

Exit mobile version