Site icon PowerTV

ಕಾಲೇಜಿಗೆ ಚಕ್ಕರ್, ಬಾರ್​ಗೆ ಹಾಜರ್; ಎಚ್ಚೆತ್ತುಕೊಂಡ ಅಬಕಾರಿ ಇಲಾಖೆ

ತುಮಕೂರು; ಜಿಲ್ಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಾಲೇಜು ಬಿಟ್ಟು ಬಾರ್ ಕಡೆ ಮುಖ ಮಾಡಿದ್ದಾರೆ. ಬಸ್ ಸ್ಯಾಂಡ್ ಬಳಿಯಿರುವ ಕಾರ್ತಿಕ್ ಬಾರ್ ನವರು ವಿದ್ಯಾರ್ಥಿಗಳನ್ನೇ ಟಾರ್ಗೇಟ್ ಮಾಡಿ ಬ್ಯುಸಿನೆಸ್ ಮಾಡುತ್ತಿದ್ದಾರೆ.

ಮಟ ಮಟ ಮಧ್ಯಾಹ್ನವೇ ವಿದ್ಯಾರ್ಥಿಗಳಿಗೆ ಕುಡಿಯಲು ಮದ್ಯವನ್ನು ನೀಡಿ ಮಕ್ಕಳ ಭವಿಷ್ಯವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾನೂನನ್ನು ಗಾಳಿಗೆ ತೂರಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಇದೆಲ್ಲಾ ಗೊತ್ತಿದ್ದು ಕಣ್ಮುಚ್ಚಿ ಕುಳಿತಿದ್ದಾರಾ ಎಂಬ ಸಂಶಯ ಮೂಡುತ್ತಿದೆ. ಕಾಲೇಜು ಬಿಟ್ಟು ವಿದ್ಯಾರ್ಥಿಗಳು ಮದ್ಯ ನಶೆಯಲ್ಲಿ ತೇಲಾಡುತ್ತಿರುವ ವೀಡಿಯೋ ಪವರ್ ಟಿವಿಗೆ ಲಭ್ಯವಾಗಿತ್ತು.

ಪೋಷಕರು ಈ ರೀತಿ ಘಟನೆ ನಡೆಯದಂತೆ ಜಾಗರೂಕರಾಗಿರಬೇಕು ಹಾಗೇ ಕಾಲೇಜು ಆಡಳಿತ ಮಂಡಳಿಯೂ ಸಹ ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇದರ ಜೊತೆಗೆ ಅಬಕಾರಿ ಇಲಾಖೆ ಎಚ್ಚೆತ್ತು ಕಾನೂನು ಉಲ್ಲಂಘನೆ ಮಾಡಿದ ಬಾರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂಬ ಪವರ್ ಟಿವಿ ಸುದ್ದಿ ಬಿತ್ತರಿಸಿದ ನಂತರ ಅಬಕಾರಿ ಇಲಾಖೆ ಎಚ್ಚೆತ್ತುಕೊಂಡಿದೆ.

ಇಂದು ಈ ಬಗ್ಗೆ ಸುದ್ದಿ ಮಾಡಿದ ಬೆನ್ನಲ್ಲೇ ಯಲ್ಲಿ ಜಿಲ್ಲಾ ಅಬಕಾರಿ ಇಲಾಖೆ ಡಿಸಿ ಶೈಲಜಾ ಅವರು ಭೇಟಿ ನೀಡಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್ ನವೀನ್ ರಿಂದ ಸ್ಥಳ ಮಹಜರೂ ಕಾರ್ಯ ನಡೆದಿದೆ. ಸದ್ಯ ಸಿಸಿ ಟಿವಿ ವಿಡಿಯೋ ಪಡೆದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Exit mobile version