Site icon PowerTV

BBMP ಅಧಿಕಾರಿಗಳು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ

ಬೆಂಗಳೂರು : ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಬಿಬಿಎಂಪಿ ಇಬ್ಬಾಗ ನೀತಿ ಅನುಸರಿಸುತ್ತಿದ್ದು ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ವಿರುದ್ದ ಅಧಿಕಾರಿಗಳು ದೂರು ನೀಡಿದ್ದಾರೆ ಎಂದು ಆರೋಪಿಸಿ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಬಿಬಿಎಂಪಿ ಕಂದಾಯ ಇಲಾಖೆ ವಿಶೇಷ ಆಯುಕ್ತರಿಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ದೂರು ಸಲ್ಲಿಸಿ ಬಳಿಕ ಮನೋಹರ್ ಮಾತನಾಡಿ ನೆನ್ನೆ ಪೇ ಸಿ.ಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅಧಿಕಾರಿಗಳೇ ದೂರು ನೀಡಿದ್ದಾರೆ.

ನಗರದಾದ್ಯಂತ ಹಲವು ಬಿಜೆಪಿ ನಾಯಕರು ಫ್ಲೆಕ್ಸ್ ಹಾಕಿದ್ರು ಯಾವ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಬಿಬಿಎಂಪಿ ಕೆಲ ಅಧಿಕಾರಿಗಳು ಬಿಜೆಪಿ ಪರ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

Exit mobile version