Site icon PowerTV

ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟದಿಂದ ಗುಂಪು ಘರ್ಷಣೆ

ಹಾವೇರಿ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟದಿಂದ ಗುಂಪು ಘರ್ಷಣೆಯಾದ ಘಟನೆ ಜಿಲ್ಲೆಯ ರಾಣೆಬೇನ್ನೂರು ನಗರದಲ್ಲಿ ತಡ ರಾತ್ರಿ ನಡೆದಿದೆ.

ನಗರದ ಕಾಕಿಗಲ್ಲಿಯ ಗಣೇಶನ ವಿಸರ್ಜನೆ ಮೆರವಣಿಗೆಯ ವೇಳೆ ಚೂರಿ ಇರಿತದ ವದಂತಿ ಹಬ್ಬಿಸಿದ್ದೆ ಕಲ್ಲು ತೂರಾಟಕ್ಕೆ ಕಾರಣವಾಗಿದೆ. ಮಾರಕಾಸ್ತಗಳಿಂದ ಹಲ್ಲೆ ಮಾಡಲಾಗಿದೆ ಎಂದು ಚಾಕು ಇರಿತಕ್ಕೆ ಒಳಗಾಗದ ಹಿಂದೂ ಯುವಕರು ದೂರು ನೀಡಿದ್ದಾರೆ.

ಅದ್ರೆ ದೂರಿನಲ್ಲಿ ಯಾವುದೇ ವ್ಯಕ್ತಿಗಳ ಹೆಸರಾಗಲಿ ಮಾಹಿತಿ ಆಗಲಿ ಇಲ್ಲ. ದೂರಿನ ಸರಾಂಶದಲ್ಲಿ ನಗರದ ದರ್ಗಾದ ಬಳಿ ಗಣೇಶ ವಿಸರ್ಜನೆಯ ವೇಳೆ 300ರಕ್ಕೂ ಹೆಚ್ಚು ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎಂದು ರಾಣೆಬೇನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅದ್ರೆ ಪೊಲೀಸರ ವರದಿಯಲ್ಲಿ ಘಟನೆಯ ಬಗ್ಗೆ ಪ್ರಕರಣ ಹಲ್ಲೆಯಿಂದ ಗಾಯಗೊಂಡವರ ಹೆಸರಾಗಲಿ ಹಲ್ಲೆ ಮಾಡಿದವರ ಹೆಸರಾಗಲಿ ದೂರಿನಲ್ಲಿ ದಾಖಲಾಗಿಲ್ಲ.

Exit mobile version