Site icon PowerTV

ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪರಮಾಣು ಬಾಂಬ್ ದಾಳಿಯ​ ಎಚ್ಚರಿಕೆ ನೀಡಿದ ಪುಟಿನ್​

ರಷ್ಯಾ; ಉಕ್ರೇನ್ ತಮ್ಮ ದೇಶವನ್ನ ಮರುವಶ ಪಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಉಕ್ರೀನ್​ಗೆ ಅಣ್ವಸ್ತ್ರ ಬಳಕೆ ಎಚ್ಚರಿಕೆಯನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ನೀಡಿದ್ದಾರೆ.

ಉಕ್ರೇನ್‌ನಲ್ಲಿನ ಯುದ್ಧವು ಏಳು ತಿಂಗಳ ಗಡಿಯನ್ನು ಸಮೀಪಿಸುತ್ತಿದ್ದಂತೆ ಈ ಬೆದರಿಕೆಯನ್ನ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪುಟೀನ್​ ಬೆದರಿಕೆ ಹಾಕಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದಲ್ಲಿ ಭಾಗಶಃ ಸಜ್ಜುಗೊಳಿಸುವಿಕೆಯನ್ನು ಅಣ್ವಸ್ತ್ರ ಬಳಕೆಯನ್ನ ಘೋಷಿಸಿದ್ದಾರೆ.

ಉಕ್ರೇನ್​ ​ತನ್ನ ಪ್ರದೇಶಗಳನ್ನು ಉಕ್ರೇನ್ ಮರುವಶ ಹಿನ್ನೆಲೆಯಲ್ಲಿ ಕೆರಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್, ಇದು ಉಕ್ರೇನ್​ ವಿರುದ್ಧ ಅಲ್ಲ, ಪಾಶ್ಚಿಮಾತ್ಯ ಶಕ್ತಿಗಳ ವಿರುದ್ಧ ಎಂದು ಪುಟಿನ್ ಹೇಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿವೆ. ಅನೇಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ನಮ್ಮ ಜನರನ್ನು ರಕ್ಷಿಸಲು ನಾವು ಎಲ್ಲಾ ಸಂಪನ್ಮೂಲಗಳನ್ನು ಬಳಸುತ್ತೇವೆ ಎಂದು ಪುಟಿನ್ ತಮ್ಮ ಭಾಷಣದಲ್ಲಿ ಹೇಳಿದರು.

Exit mobile version