Site icon PowerTV

ಬಿಳಿ ಬಣ್ಣಕ್ಕೆ ತಿರುಗಿದ ಕೇದಾರನಾಥ

ಉತ್ತರಾಖಂಡ್ :  ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ಕೇದಾರನಾಥ್ ಧಾಮ್, ಶಿವನ ಆರಾಧಕರಿಗೆ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ್ ಧಾಮ್ ನಲ್ಲಿ ವರ್ಷದ ಮೊದಲ ಹಿಮಪಾತವಾಗಿದೆ. ಹಿಮಪಾತದ ನಂತರ ಕೇದಾರನಾಥ ದೇವಾಲಯದ ಸುತ್ತಲಿನ ಪರ್ವತ ಶಿಖರಗಳು ಮುತ್ತಿನ ಬಿಳಿ ಬಣ್ಣಕ್ಕೆ ತಿರುಗಿದವು. ತಂಪಾದ ವಾತಾವರಣದಿಂದಾಗಿ ದೇವಾಲಯದ ಸುತ್ತಲಿನ ಪ್ರದೇಶವು ಲಘು ಮಂಜಿನಿಂದ ಕೂಡಿತ್ತು. ತಣ್ಣನೆಯ ವಾತಾವರಣದ ನಡುವೆಯೂ ಭಕ್ತರು ಆಶೀರ್ವಾದ ಪಡೆಯಲು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು.

ಇನ್ನು, ಭಕ್ತರು ಸೆಲ್ಫಿ ಕ್ಲಿಕ್ಕಿಸುತ್ತಾ ದೇವಸ್ಥಾನಕ್ಕೆ ಹೋಗುವುದನ್ನು ಮುಂದುವರೆಸಿದರು. ಭಾರತದ ಪುರಾತನ ದೇವಾಲಯಗಳಲ್ಲಿ ಒಂದಾದ ಕೇದಾರನಾಥವು ಶಿವನಿಗೆ ಸಮರ್ಪಿತವಾಗಿದೆ, ಇದು ತನ್ನ ನೈಸರ್ಗಿಕ ಸೌಂದರ್ಯದಿಂದ ಜನರನ್ನು ಆಕರ್ಷಿಸುತ್ತಿದೆ.

Exit mobile version