Site icon PowerTV

ರಸ್ತೆ ದುರಸ್ತಿಗೆ ಆಗ್ರಹಿಸಿ ಕೆಸರಿನ ಹೊಂಡದಲ್ಲಿ ಶಾಸಕಿ ಪ್ರತಿಭಟನೆ

ಜಾರ್ಖಂಡ್; ರಸ್ತೆ ದುರಸ್ತಿಗೆ ಆಗ್ರಹಿಸಿ ಜಾರ್ಖಂಡ್‌ನ ಶಾಸಕಿಯೊಬ್ಬರು ಇಂದು ಕೆಸರಿನ ಹೊಂಡದಲ್ಲಿ ಸ್ನಾನ ಮಾಡಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿರುವುದು ಎಲ್ಲೆಡೆ ವೈರಲ್​ ಆಗಿದೆ.

ರಾಷ್ಟ್ರೀಯ ಹೆದ್ದಾರಿ 133 ಕೆಸರುಮಯವಾಗಿದ್ದು, ಹೊಂಡಗುಂಡಿ ಬಿದ್ದಿದ್ದು, ದುರಸ್ತಿಗೆ ಆಗ್ರಹಿಸಿ ಗೊಡ್ಡಾದ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರೇ ಕೆಸರಿನಲ್ಲಿ ಮಿಂದೆದ್ದು ವಿನೂತವಾಗಿ ಪ್ರತಿಭಟನೆ ಮಾಡಿದರು.

ಗುಂಡಿಗಳಿಂದ ಸಂಚಾರವೇ ದುಸ್ತರವಾಗಿದ್ದು, ಸಾರ್ವಜನಿಕರು ಇಡೀ ಶಾಪ ಹಾಕುತ್ತಿದ್ದಾರೆ. ಕೂಡಲೇ ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡ ಸರಿಪಡಿಸಬೇಕು. ಕೆಲಸ ಆರಂಭವಾಗುವವರೆಗೂ ರಸ್ತೆಯಿಂದ ಏಳುವುದಿಲ್ಲ ಎಂದು ಶಾಸಕಿ ಪಟ್ಟುಹಿಡಿದರು.

ಇನ್ನು ಈ ರಸ್ತೆ ಹದಗೆಟ್ಟ ಹಿನ್ನಲೆಯಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಈ ಹಿಂದೆ ಹಲವು ಬಾರಿ ದುರಸ್ತಿ ಮಾಡಿದ್ದರೂ, ಕಳಪೆ ಕಾಮಗಾರಿಯಿಂದಾಗಿ ರಸ್ತೆ ಮತ್ತೆ ಗುಂಡಿ ಬಿದ್ದು, ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯ ಆಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಜಾರ್ಖಂಡ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Exit mobile version