Site icon PowerTV

ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು ಮಕ್ಕಳು

ಮಂಡ್ಯ; ತಮಗೆ ಕಲಿಸಿದ ಸರ್ಕಾರಿ ಶಾಲೆಯ ಗುರುಗಳು ಬೇರೆ ಕಡೆ ವರ್ಗಾವಣೆಯಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಣ್ಣೀರಿಟ್ಟ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ.

ಹಲವು ವರ್ಷಗಳಿಂದ ಭೀಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು ವರ್ಗಾವಣೆಯಾಗಿದ್ದಾರೆ. ಸದ್ಯ ಮಂಡ್ಯದ ಡಯಟ್‌ಗೆ ಶಿಕ್ಷಕ ಪುಟ್ಟರಾಜು ವರ್ಗಾವಣೆಯಾಗಿದ್ದಾರೆ. ತಮ್ಮ ಶಿಕ್ಷಕರು ಬೇರೆ ಕಡೆ ವರ್ಗಾವಣೆಯಿಂದ ವಿದ್ಯಾರ್ಥಿಗಳು ಕಣೀರಿಟ್ಟಿದ್ದಾರೆ.

ಕಾಲಿಗೆ ಬಿದ್ದು ಶಾಲೆ ಬಿಟ್ಟು ಹೋಗಬೇಡಿ, ಇಲ್ಲೇ ಇರಿ ಮೇಷ್ಟ್ರೇ ಎಂದು ಮಕ್ಕಳು ಕಣ್ಣೀರು ಹಾಕಿದ್ದಾರೆ. ಮಕ್ಕಳ ಜತೆಗೆ ಸಹ ಶಿಕ್ಷಕರು ಹಾಗೂ ಪೋಷಕರು ಶಿಕ್ಷಕರ ಕಾಲಿಗೆ ಬಿದ್ದು ಬೇರೆ ಕಡೆ ವರ್ಗಾವಣೆಯಾಗದಂತೆ ಹೇಳುತ್ತಿದ್ದಾರೆ.

Exit mobile version