Site icon PowerTV

ಕಾಂಗ್ರೆಸ್ ಚುನಾವಣೆ ಗೋಸ್ಕರ್ ಟೂಲ್‌ ಕಿಟ್ ರೆಡಿಮಾಡಿದೆ : ಸಿಟಿ ರವಿ

ನವದೆಹಲಿ : ಕಾಂಗ್ರೆಸ್ ಚುನಾವಣೆ ಗೋಸ್ಕರ್ ಟೂಲ್‌ ಕಿಟ್ ರೆಡಿಮಾಡಿದೆ ಎಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಕಾಂಗ್ರೆಸ್ ಚುನಾವಣೆ ಗೋಸ್ಕರ್ ಟೂಲ್‌ ಕಿಟ್ ರೆಡಿಮಾಡಿದೆ. ಮೂರು ತಿಂಗಳಿನಿಂದ ಚುನಾವಣೆಗಾಗಿ ಈ ರೀತಿ ಆರೋಪ ಮಾಡ್ತಿದ್ದಾರೆ. ಯಾವುದಾದರು ಆಧಾರ ಇದ್ರೆ ಲೋಕಾಯುಕ್ತಕ್ಕೆ ದೂರು ನೀಡಬಹುದಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತ ಓಪನ್ ಆಗಿದೆ. ಅವರ ಅಧಿಕಾರದ ಅವಧಿಯಲ್ಲಿ ಲೋಕಾಯುಕ್ತ ಬಂದ್ ಮಾಡಲಾಗಿತ್ತು. ಎಸಿಬಿ ರಚನೆ ಮಾಡಿ ಅವರಂತೆ ತನಿಖೆ ನಡೆಸಿದ್ರು. ಅವರು ಹಲವು ಪ್ರಕರಣವನ್ನ ಮುಚ್ಚಿಹಾಕಿದ್ರು. ಪಿಎಸ್ ಐ ಹಗರಣದಲ್ಲಿ ನಮಗೆ ಪ್ರಕರಣ ಮುಚ್ಚಾಕಲು ಬರುತ್ತಿತ್ತು ಎಂದರು.

ಇನ್ನು, ನಾವು ಐಜಿಪಿ ಮಟ್ಟದ ಅಧಿಕಾರಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ವಿಚಾರಣೆಯ ಹಿನ್ನಲೆ ಹಲವು ಅಧಿಕಾರಿಗಳನ್ನ ಬಂಧಿಸಲಾಗಿದೆ. ಯಾವ ವಿಚಾರದಲ್ಲಿ 40% ಅನ್ನೋ ಸ್ಪಷ್ಟತೆ ಇಲ್ಲ. ಗುತ್ತಿಗೆದಾರರ ಆರೋಪದಲ್ಲೂ ಹುರುಳಿಲ್ಲ ಎಂದು ಹೇಳಿದರು.

Exit mobile version