Site icon PowerTV

PayCM ಕುರಿತು ಸಿಎಂ ನೋ ರಿಯಾಕ್ಷನ್

ಬೆಂಗಳೂರು : ಸಿಲಿಕಾನ್​ ಸಿಟಿ ಹಲವೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋ ಜೊತೆ ಕ್ಯೂ-ಆರ್ ಕೋಡ್‌ನೊಂದಿಗೆ PayCM ಪೋಸ್ಟರ್‌ ರಾರಾಜಿಸುತ್ತಿದ್ದು, ಪೇ ಸಿಎಂ ಎಂದು ಕಾಂಗ್ರೆಸ್​​​ನವರು ಅಭಿಯಾನ ನೆಡೆಸುತ್ತಿದ್ದಾರೆ.

ಪೋಸ್ಟರ್​ನಿಂದ ಸಿಎಂಗೆ ಭಾರಿ‌ ಮುಜುಗರ ಉಂಟಾಗಿದ್ದು, ಇದರಿಂದ ಸಿಎಂ ಬೊಮ್ಮಾಯಿ‌ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ರಾತ್ರೋರಾತ್ರಿ ಪೋಸ್ಟರ್ ಹಾಕಿರೋರ ಬಗ್ಗೆ ಸಿಎಂ ಮಾಹಿತಿ‌ ಕೇಳಿದ್ದು, ಇದರ ಹಿಂದೆ ಯಾರ ಕೈವಾಡವಿದ್ದರು ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ರೇಸ್ ಕೋರ್ಸ್ ಬಳಿ ಹಾಕಿದ್ದ PayCM ಪೋಸ್ಟರ್​ಗಳನ್ನು ಪೊಲೀಸ್ ಸಿಬ್ಬಂದಿಗಳು ಕಿತ್ತು ಹಾಕಿದ್ದು, ಪೋಸ್ಟರ್ ಹಾಕಿದವ್ರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Exit mobile version