Site icon PowerTV

ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಅಣ್ಣ-ತಮ್ಮ

ರಾಯಚೂರು;  ಕೃಷ್ಣಾ ನದಿಯಲ್ಲಿ ಅಣ್ಣನ ಜತೆಗೆ ತಮ್ಮ ಕೊಚ್ಚಿ ಹೋದ ಘಟನೆ ಜಿಲ್ಲೆ‌ಯ ದೇವದುರ್ಗ ತಾಲ್ಲೂಕಿನ ಕೊಪ್ಪುರು ಗ್ರಾಮದ ಬಳಿ ನಡೆದಿದೆ.

ಅಣ್ಣ ರಜಾಕ್ ಸಾಬ್(35) ಹಾಗೂ ತಮ್ಮ ಮೌಲಾ ಸಾಬ್ (32) ಕೊಚ್ಚಿಹೋದವರು, ಇಂದು ಕುಟುಂಬ ಸಮೇತರಾಗಿ ಕೃಷ್ಣಾ ನದಿ ತೀರಕ್ಕೆ ಹೋಗಿದ್ದ ವೇಳೆಯಲ್ಲಿ ಸಾನಿಯಾ ಅನ್ನೋ ಬಾಲಕಿ ಕೊಚ್ಚಿ ಹೋಗುತ್ತಿದ್ದಳು.

ಕೂಡಲೇ ಸಾನಿಯಾಯನನ್ನು ಇತರೆ ಕುಟುಂಬಸ್ಥರು ರಕ್ಷಣೆ ಮಾಡಿದರು. ಇದೇ ಸಮಯದಲ್ಲಿ ಕೈ ಕೈ ಹಿಡಿದುಕೊಂಡು ಸ್ನಾನ ಮಾಡುತ್ತಿದ್ದ ಅಣ್ಣ ರಜಾಕ್ ಸಾಬ್ ಹಾಗೂ ತಮ್ಮ ಮೌಲಾ ಸಾಬ್ ಕೃಷ್ಣಾ ನದಿ ಪಾಲಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ದೇವದುರ್ಗ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದರು. ಸದ್ಯ ಇಬ್ಬರಿಗಾಗಿ ಮುಂದುವರೆದ ಕಾರ್ಯಾಚರಣೆ ನಡೆಯುತ್ತಿದೆ.

Exit mobile version