Site icon PowerTV

14ನೇ ದಿನಕ್ಕೆ ಕಾಲಿಟ್ಟ ‘ಭಾರತ್ ಜೋಡೋ’

ನವದೆಹಲಿ : ಕಾಂಗ್ರೆಸ್​ನ ‘ಭಾರತ್ ಜೋಡೋ ಯಾತ್ರೆ’ 14 ನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಇಂದು ಕೊಚ್ಚಿಯಿಂದ 14 ನೇ ದಿನದ ‘ಭಾರತ್ ಜೋಡೋ ಯಾತ್ರೆ’ ಪುನರಾರಂಭಿಸಿದರು.

ರಾಹುಲ್ ಗಾಂಧಿ ಮತ್ತು ಪಕ್ಷದ ಇತರೆ ನಾಯಕರು ಭಾರತವನ್ನು ಒಂದುಗೂಡಿಸಲು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಕೈಗೊಂಡಿದ್ದಾರೆ.

Exit mobile version