Site icon PowerTV

ಸದನದಲ್ಲಿ ಕಾವೇರಿದ 40% ಹಗರಣ

ಬೆಂಗಳೂರು : ಸದನದಲ್ಲಿ PSI ನೇಮಕಾತಿ ಅಕ್ರಮದ ನಂತರ 40% ಭ್ರಷ್ಟಾಚಾರ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದವು. ಸದನದಲ್ಲಿ 40% ಭ್ರಷ್ಟಾಚಾರ ಬಗ್ಗೆ ಚರ್ಚೆಗೆ ಸಿದ್ದರಾಮಯ್ಯ ಅವಕಾಶ ಕೋರಿದರು, ಜನರ ತೆರಿಗೆ ಲೂಟಿ ಹೊಡೆಯಲಾಗ್ತಿದೆ.

ಚರ್ಚೆಗೆ ನಿಲುವಳಿ ಮಂಡನೆ ಮಾಡಿದ್ದೇನೆ. ನಿಯಮ 60ರಲ್ಲಿ ಚರ್ಚೆಗೆ ಅವಕಾಶ ಕೊಡಿ ಎಂದರು. ಇದಕ್ಕೆ ಆಕ್ಷೇಪಿಸಿದ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಹಾಗೆ ಮಾತನಾಡಲು ಅವಕಾಶ ಕೊಡಲು ಬರೋದಿಲ್ಲ. ನಿಮಗೆ ಗೊತ್ತು ಯಾವೆಲ್ಲಾ ವಿಚಾರ ಚರ್ಚೆಗೆ ಕೊಡಬಹುದು ಅಂತ. ಇದು ಕೊಡಲು ಬರೋದಿಲ್ಲ ಎಂದು ಸ್ಪೀಕರ್ ಕಾಗೇರಿ ತಿಳಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, 40% ಆರೋಪ ದೇಶದಲ್ಲೆಲ್ಲಾ ಸುದ್ದಿಯಾಗಿದೆ. ಪ್ರಧಾನಿ ಗಮನಕ್ಕೂ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಮಧ್ಯಪ್ರವೇಶ ಮಾಡಿದ ಕಾನೂನು ಸಚಿವ ಮಾಧುಸ್ವಾಮಿ, ಸಿದ್ದರಾಮಯ್ಯ ಅವರು ದೊಡ್ಡವರು. ಅವರು ಸ್ಪೀಕರ್ ಕಚೇರಿಗೆ ಪತ್ರ ಬರೆದು, ಅದನ್ನ ಸರ್ಕಾರದ ಗಮನಕ್ಕೆ ತರಬೇಕು. ಬಳಿಕ ಅವರಿಗೆ ಅವಕಾಶ ಕೊಡಬೇಕೋ, ಬೇಡವೋ ಅನ್ನೋದ್ರ ಬಗ್ಗೆ ನಿರ್ಧಾರ ಮಾಡ್ತೀವಿ. ಅವರು ನಿಯಮ 60ರಲ್ಲೇ ಚರ್ಚೆ ಮಾಡಲಿ ನಮ್ಮದೇನೂ ಅಭ್ಯಂತರ ಇಲ್ಲ ಎಂದರು.

Exit mobile version