Site icon PowerTV

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್..?

ಚಿತ್ರದುರ್ಗ; ಲೈಂಗಿಕ ದೌರ್ಜನ್ಯ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀ ಅವರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ.

ಚಿತ್ರದುರ್ಗದಿಂದ ದಾವಣಗೆರೆ ಮಾರ್ಗವಾಗಿ ಶಿವಮೊಗ್ಗ ಮೆಗ್ಗಾನ ಆಸ್ಪತ್ರೆಗೆ ರವಾನಿಸಲು ಇಂದು ಮಧ್ಯಾಹ್ನ 2ಗಂಟೆಗೆ ನ್ಯಾಯಾಧೀಶರಿಂದ ಆದೇಶ ಸಾಧ್ಯತೆ ಇದೆ. ಮುರುಘಾ ಶ್ರೀ ಹೃದಯ ಸಂಬಂಧಿ ಸೇರಿ ವಿವಿಧ ಚಿಕಿತ್ಸೆ ಪಡೆಯಲಿದ್ದಾರೆ.

ನ್ಯಾಯಾಧೀಶರಾದ ಕೋಮಾಲರಿಂದ ವಿಚಾರಣೆ ನಡೆಸಲಿದ್ದು, ಮೆಗ್ಗಾನ ಆಸ್ಪತ್ರೆಯಲ್ಲಿ ಸುಮಾರು 3 ವಾರಗಳ ಬಳಿಕ ಚಿಕಿತ್ಸೆ ಅನುಮತಿ ನೀಡುವ ಸಂಭವ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚನೆ ಸಾಧ್ಯತೆವಿದೆ. ಇಸಿಜಿ, ಇಕೋ, ಆಂಜೀಯೋಗ್ರಾಂ ಪರೀಕ್ಷೆಗೆ ಶ್ರೀಗಳನ್ನ ಮೆಗ್ಗಾನ್ ವೈದ್ಯರು ಒಳಪಡಿಸಬಹುದು.

ಚಿತ್ರದುರ್ಗದಲ್ಲಿ ವೈದ್ಯಕೀಯ ಪರೀಕ್ಷೆಗೆ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಪೊಲೀಸರು ಶಿವಮೊಗ್ಗಕ್ಕೆ ಕರೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ.

Exit mobile version