Site icon PowerTV

ಬೋಟ್ ರೇಸ್​​ನಲ್ಲಿ ಸ್ಪರ್ಧಿಸಿ ಗಮನ ಸೆಳೆದ ರಾಹುಲ್ ಗಾಂಧಿ

ಕೇರಳ; ಭಾರತ್ ಜೋಡೋ 12 ದಿನದ ಯಾತ್ರೆಯಲ್ಲಿ ಕಾರ್ಯನಿರತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೋಟ್​ ರೇಸ್​ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ಎಎನ್​ಐ ಸುದ್ದಿಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಕೇರಳದ ಪ್ರಸಿದ್ಧ ಸ್ನೇಕ್ ಬೋಟ್​ ರೇಸ್​​ನಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸ್ನೇಕ್ ಬೋಟ್​ ರೇಸ್​​ನಲ್ಲಿ ಬಹಳ ಉತ್ಸಾಹದಿಂದ ರಾಹುಲ್ ಗಾಂಧಿ ಸ್ಪರ್ಧಿಸಿ ಬೋಟ್​ ಕ್ರೀಡಾಪಟುಗಳ ನಡುವೆ ಕುಳಿತು ರಾಹುಲ್ ತಾವೂ ಹುಟ್ಟಾಕೊ ಮೂಲಕ ತಾವು ಕೂಡಾ ಯಾವುದೇ ಸ್ಪರ್ಧಿ ಕಮ್ಮಿ ಇಲ್ಲ ಎಂಬಂತೆ ಇರುವುದನ್ನ ನೋಡಬಹುದು.

ರಾಹುಲ್ ಗಾಂಧಿಗೆ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸಾಥ್ ನೀಡಿದರು. ರಾಹುಲ್ ಭಾಗವಹಿಸುವಿಕೆಯಿಂದ ಪುನ್ನಮಡ ಸರೋವರದಲ್ಲಿ ಸಂಚಲನ ಉಂಟಾಗಿತ್ತು.

Exit mobile version