Site icon PowerTV

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಹಾಸನ: ಸಿದ್ದರಾಮಯ್ಯ ನಾಲಗೆ ಹದ್ದುಬಸ್ತಿಲ್ಲ. ಅವರು ಹೀಗೆ ಹುಚ್ಚುಹುಚ್ಚಾಗಿ ಮಾತಾಡೋದ್ರಿಂದ ದೊಡ್ಡ ಲೀಡರ್ ಆಗ್ತೀನಿ ಎಂದು ಅನ್ಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಬೇಜವಾಬ್ದಾರಿಯಿಂದ ಮಾತಾನಾಡಬೇಕು. ಈ ರೀತಿಯ ಮಾತು ಅವರಿಗೆ ಶೋಭೆ ತರೋದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಲಜ್ಜೆಕಟ್ಟ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ರಾಜ್ಯ ಸರ್ಕಾರ ಬಗ್ಗೆ ಅದೇನು ಮಾತಾಡ್ತಾರೋ ಅದನ್ನ ವಿಧಾನಮಂಡಲದ ಅಧಿವೇಶದಲ್ಲಿ ಮಾತನಾಡಲಿ, ಅದಕ್ಕೆ ಸಾಕ್ಷಾಧಾರಗಳೊಂದಿಗೆ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದರು.

ಇನ್ನು ಮೈಸೂರನಲ್ಲಿ ನಿಂತ್ಕೊಂಡು ಹೀಗೆ ಈ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡೋದ್ರಿಂದ ನಾನು ಅವರಿಗೆ ಕೇಳ್ತೇನೆ ಮೈಸೂರಿನಲ್ಲಿ ಅವರಿಕೆ ಯಾಕೆ ಸೋಲಾಯಿತು. ಕೆಲವೇ ಅಂತರದಲ್ಲಿ ಅವರಿಗೆ ಬಾದಾಮಿಯಲ್ಲಿ ಗೆಲುವಾಯ್ತು, ನಾವು ಒಂದು ದಿವಸ ಹೋಗಿದ್ರೆ ಅವರು ಅಲ್ಲಿ ಮುಗ್ಗರಿಸಿ ಬೀಳುತ್ತಿದ್ದರು. ಈಗ ಅವರ ಕ್ಷೇತ್ರವೇನು ಎಂದು ಹುಡುಕುತ್ತಿದ್ದಾರೆ. ಇದು ಸಿದ್ದರಾಮಯ್ಯನವರ ಸ್ಥಿತಿಯಾಗುದೆ. ಮೊದಲುವ ಅವರ ಯಾವುದು ಎಂದು ಖಚಿತಪಡಿಸಿಕೊಳ್ಳಲಿ ಎಂದು ಬಿಎಸ್​ವೈ ಹೇಳಿದರು.

Exit mobile version