Site icon PowerTV

ಹಿಜಾಬ್ ಬೇಡವೆಂದು ಕಿತ್ತೆಸೆಯುತ್ತಿರುವ ಮುಸ್ಲಿಂ ಮಹಿಳೆಯರು

ನವದೆಹಲಿ: ನಮಗೆ ಹಿಜಾಬ್ ಬೇಡವೇ ಬೇಡ ಎಂದು ಹಿಜಾಬ್​ ಕಿತ್ತೆಸೆದು ಇರಾನ್​ನ ಮುಸ್ಲಿಂ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಹಿಜಾಬ್​ ವಿರೋಧಿ ಹಿಜಾಬ್ ವಿರೋಧೀಸಿ ಬಿದಿಗಿಳಿದ ಮುಸ್ಲಿಂ ಮಹಿಳೆಯರು, ಇರಾನ್​ನ ನೈತಿಕ ಪೊಲೀಸ್ ಗಿರಿ ವಿರುದ್ಧ ಮುಸ್ಲಿಂ ಯುವತಿಯರು ಕಿಡಿ ಕಾರಿದ್ದಾರೆ. ಪೊಲೀಸರು ನಡೆ ಖಂಡಿಸಿ ಹಿಜಾಬ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ಧರಿಸಿಲ್ಲವೆಂದು ಹಾಗೂ ಕೂದಲು ಮುಚ್ಚಿಕೊಂಡಿಲ್ಲ ಎಂದು ಪೊಲೀಸ್ ರಿಂದ ಬಂಧನಕ್ಕೊಳಗಾಗಿದ್ದ 22 ವರ್ಷದ ಯುವತಿ ಕೋಮಾಕ್ಕೆ ಜಾರಿ ಅಮಿನಿ ಸಾವನ್ನಪ್ಪಿದ್ದಳು. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದ ನಂತರ ವಾರಾಂತ್ಯದ ವೇಳೆಗೆ, ಸಾವಿರಾರು ಇರಾನಿನ ಮಹಿಳೆಯರು ರಾಜಧಾನಿಯಲ್ಲಿ ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದರು.

ಇನ್ನು ಪ್ರತಿಭಟನಾಕಾರರನ್ನ ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಸದ್ಯ ಇರಾನ್​ನಲ್ಲಿ ಇಂಟರ್ನೆಟ್​ ಸ್ಥಗಿತಗೊಳಿಸಲಾಗಿದೆ.

Exit mobile version