Site icon PowerTV

ಶಾಸಕ ಜಮೀರ್ ಅಹ್ಮದ್ ಸಿಎಂ ಆಗಲೆಂದು ಆಶೀರ್ವದಿಸಿದ ಫಾದರ್​.!

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮುಂದಿನ ದಿನಗಳಲ್ಲಿ ಸಿಎಂ ಆಗಲೇಂದು ಚಾಮರಾಜಪೇಟೆಯ ರಾಯಪುರಂನಲ್ಲಿರುವ ಸಂತ ಪೀಟರ್ ಪೌಲ್ ಚರ್ಚ್ ನ ಫಾದರ್ ಡೊಮಿನಿಕ್ ಝೇವಿಯರ್ ಪರಿಶ್ ಅವರು ಆಶೀರ್ವಾದ ಮಾಡಿದ್ದಾರೆ.

ಚಾಮರಾಜಪೇಟೆಯಾದ್ಯಂತ ನಡೆಯುತ್ತಿರುವ ಮದರ್ ಮೇರಿ ಫೆಸ್ಟಿವಲ್ ನಲ್ಲಿ ಇಂದು ಪಾಲ್ಗೊಂಡ ಬಳಿಕ, ಶಾಸಕ ಜಮೀರ್ ಅಹ್ಮದ್ ಖಾನ್ ಅವರು, ಹಬ್ಬದ ಪ್ರಯುಕ್ತ ರಾಯಪುರಂನಲ್ಲಿರುವ ಸಂತ ಪೀಟರ್ ಪೌಲ್ ಚರ್ಚಿಗೆ ಭೇಟಿ ನೀಡಿದ ವೇಳೆಯಲ್ಲಿ ನೂತನವಾಗಿ ಆಗಮಿಸಿರುವ ಫಾದರ್ ಡೊಮಿನಿಕ್ ಝೇವಿಯರ್ ಪರಿಶ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬಳಿಕ ಮಾತನಾಡಿದ ಫಾದರ್ ಡೊಮಿನಿಕ್ ಝೇವಿಯರ್ ಅವರು, ಶಾಸಕರಾಗಿ, ಸಚಿವರಾಗಿ ಜಮೀರ್​ ಅಹ್ಮದ್ ಚಾಮರಾಜಪೇಟೆ ಮಾತ್ರವಲ್ಲದೇ, ವಿವಿಧ ಕ್ಷೇತ್ರದಲ್ಲಿ ಬಡವರಿಗೆ ಸ್ಪಂದಿಸಿದ್ದಾರೆ. ಅವರ ಜನಪರ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು ಹಮ್ಮಿಕೊಂಡಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಖಾನ್ ಅವರಲ್ಲಿ ಸಿಎಂ ಆಗುವ ಎಲ್ಲ ಅರ್ಹತೆಗಳೂ ಇವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಅವರು ಈ ರಾಜ್ಯದ ಸಿಎಂ ಆಗಲಿ ಎಂದು ಫಾದರ್​ ಪ್ರಾರ್ಥಿಸಿದರು.

Exit mobile version