Site icon PowerTV

ರಾಜಕೀಯ ಗುರುವನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ.!

ಬೆಂಗಳೂರು: ವಿಧಾನ ಸಭೆ ಕಲಾಪದ ಅಧಿವೇಶನ ಮುಗಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಮೊನ್ನೆ ತಾನೇ ಹೆಚ್​ಡಿಡಿ ಅವರನ್ನ ಸಚಿವ ಆರ್ ಅಶೋಕ್​ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಈಗ ಸಿದ್ದರಾಮಯ್ಯ ಅವರು ದೇವೇಗೌಡ ಅವರ ಬೆಂಗಳೂರಿನ ಪದ್ಮನಾಭನಗರ ಅಮೋಘ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರು ತಮ್ಮ ಗುರುವಿನ ಮನೆಗೆ ಸಾಕಷ್ಟು ದಿನಗಳ ನಂತರ ಹೋಗಿದ್ದಾರೆ. ಕೆಲವೊಂದು ರಾಜಕೀಯ ‌ಬೆಳವಣಿಗೆಯಿಂದ ಇಷ್ಟು ದಿನ ಗುರುಶಿಷ್ಯರು ಅಂತರ ಕಾಯ್ದುಕೊಂಡಿದ್ದರು, ಇದೀಗ ತಮ್ಮ ರಾಜಕೀಯ ಗುರುವಿನ ಅರೋಗ್ಯವನ್ನ ಸಿದ್ದರಾಮಯ್ಯ ವಿಚಾರಿಸಿದ್ದಾರೆ. ಗುರು-ಶಿಷ್ಯರ ಭೇಟಿ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಕುತೂಹಲ ಮತ್ತು ವಿಶೇಷತೆ ಪಡೆದಿದೆ.

ಸೆ.21, 2016 ರಲ್ಲಿ ದೇವೇಗೌಡರ ನಿವಾಸಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದರು. ಆರು ವರ್ಷದ ಬಳಿಕ ದೇವೇಗೌಡ್ರು ನಿವಾಸಕ್ಕೆ ಸಿದ್ದರಾಮಯ್ಯ ತೆರಳಿದ್ದಾರೆ.

Exit mobile version