Site icon PowerTV

ಬೆಂಗಳೂರು ಕೆರೆ ಒತ್ತುವರಿ; ತನಿಖೆ ಮಾಡುವುದಾಗಿ ಸಿಎಂ ಘೋಷಣೆ

ಬೆಂಗಳೂರು: ಬೆಂಗಳೂರಿನ ಕೆರೆ ಒತ್ತುವರಿ ಬಗ್ಗೆ ತನಿಖೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಕೆರೆ ಒತ್ತುವರಿ ಬಗ್ಗೆ ಯಾರ ಮೇಲೂ ವೈಯಕ್ತಿಕವಾಗಿ ಆರೋಪ ಮಾಡಲ್ಲ. ನೀವು ವೈಯಕ್ತಿಕವಾಗಿ ಈ ವಿಚಾರ ತೆಗೆದುಕೊಳ್ಳಬೇಡಿ, ಆದರೆ ಕೆರೆ ಮುಚ್ಚಿರುವುದು ಮಾತ್ರ ಸತ್ಯ. ಕೆರೆ ಮುಚ್ಚಿರುವ ಕುರಿತು ತನಿಖೆ ಮಾಡಲು ಸರಕಾರ ಸಿದ್ಧವಾಗಿದೆ. ಈ ಬಗ್ಗೆ ತನಿಖೆ ಮಾಡೇ ಮಾಡ್ತೇವೆ ಎಂದು ಸಿಎಂ ಹೇಳಿದರು.

ಕರೆ ಒತ್ತುವರಿ ತನಿಖೆಯ ಸ್ವರೂಪದ ಕುರಿತು ಮುಂದೆ ಹೇಳ್ತೇನೆ. ಕೆರೆಗಳನ್ನು ಯಾವ ರೀತಿ ಒತ್ತುವರಿ ಮಾಡಲಾಯ್ತು, ಕೆರೆಗಳನ್ನು ಹೇಗೆ ಮುಚ್ಚಲಾಯ್ತು, ಇದಕ್ಕೆ ಅನುಮತಿ ಕೊಟ್ಟವರು ಯಾರು. ಎಲ್ಲದರ ಬಗ್ಗೆಯೂ ಸಹ ತನಿಖೆ ಮಾಡಿಸುತ್ತೇವೆ ಎಂದು ವಿಧಾನಸೌಧದ ಅಧಿವೇಶನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ಕೆರೆ ಒತ್ತುವರಿ ತನಿಖೆಯನ್ನ ಸಿದ್ದರಾಮಯ್ಯ ಸ್ವಾಗತಿಸಿದ್ದು, ಸರ್ಕಾರದ ನಿರ್ಧಾರವಕ್ಕೆ ನಾವು ಬದ್ಧರಾಗಿದ್ದೇವೆ. ಯಾರ್ಯಾರು ಒತ್ತುವರು ಮಾಡಿದ್ದಾರೋ ಗೊತ್ತಾಗಲಿ ಎಂದು ಸಿದ್ದರಾಮಯ್ಯ ತಿಳಿಸಿದರು.

Exit mobile version